More

    ಪೌತಿ ಅದಾಲತ್ ಯಶಸ್ವಿ ಚಾಲನೆ

    ಬ್ರಹ್ಮಾವರ: ಕಂದಾಯ ಇಲಾಖೆಯ ಮಹಾತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಪೌತಿ ಅದಾಲತ್ ಶುಕ್ರವಾರ ಬ್ರಹ್ಮಾವರದಲ್ಲಿ ಚಾಲನೆ ನೀಡಲಾಯಿತು.

    ಬ್ರಹ್ಮಾವರ ಮತ್ತು ಕೋಟ ಹೋಬಳಿಯ 52 ಗ್ರಾಮಗಳಲ್ಲಿ ಆಯ್ದ ಮನೆಗಳಲ್ಲಿ ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಜಮೀನಿನ ಮಾಲೀಕತ್ವ ಮೃತರ ಉತ್ತರಾಧಿಕಾರಿಗೆ ನೇರವಾಗಿ ಖಾತೆ ಬದಲಾವಣೆ ಪ್ರಕ್ರಿಯೆ ನಡೆಯಿತು.

    ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ ಮತ್ತು ಇಲ್ಲಿನ ಕಂದಾಯ ನಿರೀಕ್ಷ ಲಕ್ಷ್ಮೀನಾರಾಯಣ ಭಟ್, ಗ್ರಾಮ ಲೆಕ್ಕಿಗ ಸೌಮ್ಯ ಕೋಟ್ಯಾನ್, ಗ್ರಾಮ ಸಹಾಯಕ ಹರೀಶ್ ನಾಯಕ್, ಹರೀಶ್ ಕುಮಾರ್, ಕೋಟದ ಕಂದಾಯ ನಿರೀಕ್ಷಕ ರಾಜು, ಉಪತಹಸೀಲ್ದಾರ್ ವಸಂತ್ ಕುಮಾರ್, ಗ್ರಾಮ ಲೆಕ್ಕಿಗ ಚೆಲುವರಾಜು, ಗ್ರಾಮ ಸಹಾಯಕ ರಾಜು ಮೋಗವೀರ ಮತ್ತು ಪ್ರತಿ ಗ್ರಾಮಲೆಕ್ಕಿಗರು ಆಯ್ದ 3 ಮನೆಗಹಿಗೆ ಹೋಗಿ ದಾಖಲೆ ಮಾಡಿ ನಿಧನ ಹೊಂದಿದವರ ಹೆಸರಿನಿಂದ ಕುಟುಂಬದ ಉತ್ತರಾಧಿಕಾರಿಗಳಿಗೆ ಪಹಣಿ ಮಾಡಲಾಯಿತು.

    ಬ್ರಹ್ಮಾವರ ಹೋಬಳಿಯ ಚಾಂತಾರು, ವಾರಂಬಳ್ಳಿ, ಕೋಟ ಹೋಬಳಿಯ ಗಿಳಿಯಾರು ಕೋಟತಟ್ಟು ಸೇರಿದಂತೆ ಅನೇಕ ಭಾಗದಲ್ಲಿ ಅದಾಲತ್ ಯಶಸ್ವಿಯಾಯಿತು. ಈ ಯೋಜನೆಯಿಂದ ಮೃತರ ಕುಟುಂಬದವರಿಗೆ ಸರ್ಕಾರದ ಅನೇಕ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ. ಯೋಜನೆಯ ಪ್ರಯೋಜನಾ ಪಡೆದ ಫಲಾನುಭವಿಗಳು ಶ್ಲಾಘಿಸಿದರು.

    ಕೋಟತಟ್ಟು ಪರಿಸರದಲ್ಲಿ ಪೌತಿ ಅದಾಲತ್: ಕಂದಾಯ ಇಲಾಖೆಯಿಂದ ಕೋಟ ಹೋಬಳಿ ಪ್ರದೇಶದ ಗಿಳಿಯಾರು, ಮಣೂರು ಮತ್ತು ಕೋಟತಟ್ಟು ಗ್ರಾಮಗಳಲ್ಲಿ ಪೌತಿ ಅದಾಲತ್ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ.

    ಶುಕ್ರವಾರ ಕೋಟ ಹಾಗೂ ಕೋಟತಟ್ಟು, ಶಿರಿಯಾರ ಮತ್ತಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಪೌತಿ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ಹಾಗೂ ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯ ನಿರ್ದೇಶನದಡಿ ಪೌತಿ ಅದಾಲತ್ ಆಯೋಜಿಸಲಾಗಿದೆ.

    ಕೋಟ ನಾಡಕಚೇರಿಯ ಉಪತಹಸೀಲ್ದಾರ್ ವಸಂತ, ಕೋಟ ಕಂದಾಯ ಅಧಿಕಾರಿ ರಾಜು, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಸಹಾಯಕ ರಾಜು ಮರಕಾಲ, ಕೋಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts