More

    401 ಜನರಿಗೆ ತಲಾ ಎರಡು ಸಾವಿರ ಹಂಚಿದ ಪವನ್ … ಕ್ರೌಡ್ ಫಂಡಿಂಗ್ ಮೂಲಕ ಬಂದ ಹಣ ನೇರ ಕಾರ್ಮಿಕರ ಖಾತೆಗೆ

    ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಚಿತ್ರರಂಗದ ಕಾರ್ಮಿಕರ ನೆರವಿಗೆ ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಬಂದಿದು, ಕ್ರೌಡ್‌ಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸಿದ್ದು ಗೊತ್ತೇ ಇದೆ. ಹಾಗೆ ಸಂಗ್ರಹವಾದ ಎಂಟು ಲಕ್ಷ್ವನ್ನು ಅವರು 401 ಸಿನಿಮಾ ಕಾರ್ಮಿಕರಿಗೆ ನೇರವಾಗಿ ಖಾತೆಗೆ ಹಾಕಿಸಿದ್ದಾರೆ. ಮಂಗಳವಾರ ಎಲ್ಲಾ ಕಾರ್ಮಿಕರಿಗೂ ತಲಾ ಎರಡು ಸಾವಿರ ರೂಪಾಯಿಗಳು ಡೆಪಾಸಿಟ್ ಆಗಿದೆ. ಅಷ್ಟೇ ಅಲ್ಲ, ನಿನ್ನೆಯಿಂದ ಒಂದು ಲಕ್ಷ ಮತ್ತೆ ಸಂಗ್ರಹವಾಗಿದ್ದು, ಅದನ್ನು ಸದ್ಯದಲ್ಲೇ 50 ಜನರಿಗೆ ಹಂಚುವುದಾಗಿ ಪವನ್ ಹೇಳಿದ್ದಾರೆ.

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಪವನ್, ಈ ಪ್ರಕ್ರಿಯೆ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ. ‘ಕಳೆದ 10 ದಿನಗಳಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಹಣ ಸಂಗ್ರಹ ಮಾಡುವುದು ಅಷ್ಟು ಕಷ್ಟವಾಗಲಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಕ್ರೌಡ್​ ಫಂಡಿಂಗ್​ ಬಗ್ಗೆ ಹೇಳುತ್ತಿದ್ದಂತೆಯೇ, ಧನಸಹಾಯ ಮಾಡುವ ಮೂಲಕ ಹಲವರು ನೆರವಾದರು. ಆದರೆ, ಅದನ್ನು ಹಂಚುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ‘ಆ ದಿನಗಳು’ ಚೇತನ್, ಮೇಕಪ್ ಪುರುಷೋತ್ತಮ್ ಮುಂತಾದವರು ಕಾರ್ಮಿಕರ ಜತೆಗೆ ಸಂಪರ್ಕ ಸಾಧಿಸಿ, ಅವರ ಅಕೌಂಟ್ ನಂಬರ್‌ಗಳನ್ನು ತೆಗೆದುಕೊಟ್ಟರು. ಹೀಗೆ ಸಂಗ್ರಹವಾದ 8,01,257 ರೂಪಾಯಿಗಳನ್ನು ಮಂಗಳವಾರ 401 ಜನರಿಗೆ ನೇರವಾಗಿ ಖಾತೆಗೆ ಡೆಪಾಸಿಟ್ ಮಾಡಲಾಗಿದೆ’ ಎನ್ನುತ್ತಾರೆ ಪವನ್.

    ಈ ಮಧ್ಯೆ ಕೆಲವರು ತಪ್ಪು ಅಕೌಂಟ್ ನಂಬರ್‌ಗಳನ್ನು ಕೊಟ್ಟಿದ್ದರಿಂದ, 20 ಜನರಿಗೆ ಹಣ ಹೋಗಿಲ್ಲವಂತೆ. ಈಗ ಅವರಿಂದ ಮತ್ತೆ ಸರಿಯಾದ ನಂಬರ್‌ಗಳನ್ನು ಪಡೆದು, ಮತ್ತೆ ಹಣವನ್ನು ಹಾಕಲಾಗುತ್ತದೆ ಎನ್ನುತ್ತಾರೆ ಪವನ್.

    ಇದರ ಜತೆಗೆ, ಮಂಗಳವಾರದಿಂದ ಪವನ್ ಅಕೌಂಟ್‌ಗೆ ಇನ್ನೂ ಒಂದು ಲಕ್ಷ ಜಮೆಯಾಗಿದೆಯಂತೆ. ಅದನ್ನು ಹಂಚುವ ಜವಾಬ್ದಾರಿ ಈಗ ಅವರ ಮೇಲಿದೆ. ‘ನಿನ್ನೆಯಿಂದ ಮತ್ತೆ ಒಂದು ಲಕ್ಷ ಹಣ ಬಂದಿದೆ. ನಮ್ಮ ಬಳಿ 1500 ಜನರ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಅಗತ್ಯವಿರುವ 401 ಜನರಿಗೆ ಮಾತ್ರ ಹಣ ವಿತರಿಸಲಾಗಿದೆ. ಇನ್ನೂ ಅಗತ್ಯವಿರುವ 50 ಕಾರ್ಮಿಕರಿಗೆ ಸದ್ಯದಲ್ಲೇ ಹಣ ತಲುಪಿಸಲಾಗುವುದು’ ಎನ್ನುತ್ತಾರೆ ಪವನ್.

    ಈ ಕೆಲಸದಲ್ಲಿ ತಮಗೆ ನೆರವಾದ ಎಲ್ಲರಿಗೂ ಪವನ್, ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

    ಐದು ಲಕ್ಷ ದೇಣಿಗೆ ಕೊಟ್ಟ ‘ನಾಗಿಣಿ’ ದೀಪಿಕಾ … ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts