More

    ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಿ

    ಸವದತ್ತಿ: ಕೋವಿಡ್-19 ದೃಢಪಟ್ಟ ಕುರಿತು ಲಿತಾಂಶ ಬರುವವರೆಗೆ ಸರ್ಕಾರಿ ಆಸ್ಪತ್ರೆಯಿಂದ ಆ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಯಾವ ಕ್ರಮ ಕೈಗೊಂಡಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ತಾಲೂಕು ವೈದ್ಯಾಧಿಕಾರಿ ಮಹೇಶ ಚಿತ್ತರಗಿ ಅವರನ್ನು ಪ್ರಶ್ನಿಸಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಜನರು ಬಿಪಿ, ಶುಗರ್ ಹಾಗೂ ಮೂಲ ರೋಗಕ್ಕೆ ಚಿಕಿತ್ಸೆ ಸಿಗದೇ ಸಮಸ್ಯೆ ಅನುಭವಿಸುತ್ತಿದ್ದರೂ ಕರೊನಾ ಎನ್ನಲಾಗುತ್ತಿದೆ. ಐಸಿಎಂಆರ್ ಲಿತಾಂಶ ಬರುವವರೆಗೂ ರೋಗಿಯ ಪರಿಸ್ಥಿತಿ ಹೇಳತೀರದು. ಕೋವಿಡ್-19 ಜತೆಗೆ ಮೂಲರೋಗಕ್ಕೆ ಮೊದಲಿನ ರೀತಿ ಚಿಕಿತ್ಸೆ ನೀಡಿ ಸಹಕರಿಸಿ. ಜನರ ಸೇವೆ ದೇವರ ಸೇವೆ ಎಂದು ಪರಿಗಣಿಸಿ, ಚಿಕಿತ್ಸೆ ನೀಡಿ ಎಂದರು.

    ಬಸಿಡೋಣಿ ಗೊರಾಬಾಳ ಗ್ರಾಮಗಳ ನಡುವೆ ರಸ್ತೆ ಮೇಲೆ ನೀರು ತುಂಬಿ ಕೆರೆಯಾಗಿ ಮಾರ್ಪಟ್ಟಿದೆ. ಯಲ್ಲಮ್ಮ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ಇಲ್ಲದಂತಾಗಿದೆ. ಇದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಶೀಘ್ರ ಈ ಕುರಿತು ಕ್ರಮ ವಹಿಸಿ ಎಂದು ಸೂಚಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ವಿದ್ಯುತ್ ತಂತಿ ಹಾದುಹೋಗುವುದನ್ನು ಗಮನಿಸದೇ ಕೆಳಗೆ ಸಸಿ ನೆಡುವ ಮೂಲಕ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ. ಈ ವರ್ತನೆ ಬದಲಾಗಬೇಕು. ನಾವೇ ಬೆಳೆಸಿದ ಸಸಿಗಳನ್ನು ನಾವೇ ಕತ್ತರಿಸುವಂತಾಗಬಾರದು. ಪಶು ಸಂಗೋಪನಾ ಇಲಾಖೆಯ ಕುರಿತು, ಜಾನುವಾರಗಳಿಗೆ ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

    ಅಧಿಕಾರಿಗಳು ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಜಾನುವಾರುಗಳಿಗೆ ಚಿಕಿತ್ಸೆ ಸಿಗುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

    ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಅಂಬೇಡ್ಕರ್, ಜಗಜೀವನ್‌ರಾಂ, ವಾಲ್ಮೀಕಿ ಸೇರಿ ಮಹಾನ್ ದಾರ್ಶನಿಕರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಗಳ ನಿರ್ಮಾಣ ಕಾರ್ಯ 2-3 ವರ್ಷಗಳಾದರೂ ಪೂರ್ಣಗೊಳ್ಳುತ್ತಿಲ್ಲ. ಬೆಳೆಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಗ್ರಾಮಗಳಿಗೆ ತೆರಳುವ ನಾವುಗಳು ಜನರಿಗೆ ಏನು ಉತ್ತರ ನೀಡಬೇಕು? ಈ ಸಮೀಕ್ಷೆಗಳ ವಿಲತೆಗೆ ಅಧಿಕಾರಿಗಳ ನಿಷ್ಕಾಳಜಿ ಕಾರಣ. ಬೆಳೆಹಾನಿಯಲ್ಲಿ ವ್ಯತ್ಯಾಸವಾದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದರು. ತಾಪಂ ಇಒ ಯಶವಂತಕುಮಾರ, ತಾಪಂ ಉಪಾಧ್ಯಕ್ಷೆ ಸೋನವ್ವ ದೊಡಮನಿ, ಜಿಪಂ ಸದಸ್ಯ ಜಿ.ಎಸ್.ಗಂಗಲ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts