More

    ಜಿಲ್ಲಾಸ್ಪತ್ರೆಯಲ್ಲಿ ರೋಗಿ ಕುಳಿತುಕೊಳ್ಳಲೂ ಅವಕಾಶವಿಲ್ಲ ! ಫುಟ್‌ಪಾತ್ ಮೇಲೆ ಮಲಗಿದ ಮಹಿಳೆ !

    ವಿಜಯಪುರ : ಕರೊನಾ ಕಾಲಘಟ್ಟದಲ್ಲಿ ಕರುಣೆ ಎಂಬುದೇ ಕಾಣೆಯಾಗಿದ್ದು ಸಣ್ಣ ಪುಟ್ಟ ರೋಗಕ್ಕೂ ಜನ ನರಕಯಾತನೆ ಅನುಭವಿಸುವಂತಾಗಿದೆ ಎಂಬುದಕ್ಕೆ ಗುರುವಾರ ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಘಟನೆಯೇ ಸಾಕ್ಷಿ. ಕರೊನಾ ಸೋಂಕು ಇಲ್ಲದಿದ್ದರೂ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಾ ಸತಾಯಿಸುತ್ತಿರುವುದಕ್ಕೆ ರೋಗಿ ಮತ್ತು ಅವರ ಕುಟುಂಬಸ್ಥರು ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ಕೆಮ್ಮು ನೆಗಡಿಯಿಂದ ಬಳಲುತ್ತಿರುವ ಮಹಿಳೆಯೋರ್ವಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಆಸ್ಪತ್ರೆ ಆವರಣದ ಫುಟ್‌ಪಾತ್ ಮೇಲೆ ಮಲಗಿದ ದೃಶ್ಯ ಕರಳು ಚುರ್ ಎನ್ನಿಸುವಂತಿತ್ತು. ಬೆಳಿಗ್ಗೆ ಚಿಕಿತ್ಸೆಗೆಂದು ಬಂದ ಮಹಿಳೆಯನ್ನು ದಾಖಲಿಸಿಕೊಳ್ಳದೇ ಸಂಜೆವರೆಗೆ ಕಾಯುವಂತೆ ತಿಳಿಸಿದ ವೈದ್ಯರು ಒಳಗೆ ಕುಳಿತುಕೊಳ್ಳಲು ಸಹ ಅವಕಾಶ ನೀಡಿಲ್ಲವೆಂದು ರೋಗಿ ಅಲವತ್ತುಕೊಂಡರು.

    ಇದನ್ನೂ ಓದಿ: ಸೋಂಕಿದ್ದರೂ ನೆಗೆಟೀವ್ ! ಸಿಟಿ ಸ್ಕ್ಯಾನ್​ನಲ್ಲಿ ಪಾಸಿಟಿವ್ ಬಂದರೆ ಆಸ್ಪತ್ರೆಗೆ ದಾಖಲು

    ಸಂಜೆ 4 ಕ್ಕೆ ವೈದ್ಯರು ಬರಲಿದ್ದು ಅಲ್ಲಿಯವರೆಗೆ ಹೊರಗಡೆ ಕುಳಿತುಕೊಳ್ಳಿ ಎಂದು ಹೊರಗಟ್ಟಿದ್ದಾರೆ. ಫುಟ್‌ಪಾತ್ ಮೇಲೆ ಮಲಗಿದ ರೋಗಿ ಹಲವು ಗಂಟೆಗಳ ಕಾಲ ತೀವ್ರ ಯಾತನೆ ಅನುಭವಿಸಿದ್ದಾರೆ. ಈ ಮೊದಲು ಖಾಸಗಿ ಆಸ್ಪತ್ರೆಗೆ ಅಲೆದಾಡಿದ ರೋಗಿ ಮತ್ತು ಅವರ ಕುಟುಂಬಸ್ಥರು ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಬಂದರೆ, ಇಲ್ಲೂ ಅದೇ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

    ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

    ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts