More

    ವೆಂಟಿಲೇಟರ್ ಬದಲಾಯಿಸುವಾಗ ರೋಗಿ ಸಾವು

    ಗದಗ: ನಗರದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್್ಸ) ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತೆಯೊಬ್ಬರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದಿದ್ದರಿಂದ ರೋಗಿ ಮೃತಪಟ್ಟ ಘಟನೆ ಬುಧವಾರ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
    ಏಳು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಮಹಿಳೆ ಚಿಕಿತ್ಸೆಗಾಗಿ ಜಿಮ್್ಸ ಗೆ ದಾಖಲಾಗಿದ್ದರು. ಐಸಿಯು ವೆಂಟಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಬೆಳಗಿನ ಜಾವ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್​ನಲ್ಲಿ ಸಮಸ್ಯೆ ಎದುರಾಗಿದ್ದು, ಅದನ್ನು ತೆಗೆದು ಇನ್ನೊಂದು ವೆಂಟಿಲೇಟರ್ ಅಳವಡಿಸುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಸಮಸ್ಯೆ ಇರುವ ವೆಂಟಿಲೇಟರನ್ನು ಹಾಗೆಯೇ ಬಿಟ್ಟರೆ ದೇಹದಲ್ಲಿರುವ ಆಮ್ಲಜನಕವನ್ನು ಮಷಿನ್ ಎಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ರೋಗಿಯ ಆರೋಗ್ಯ ಏರುಪೇರಾಗುವ ಸಂಭವವೂ ಇರುತ್ತದೆ. ಆದ್ದರಿಂದ ಬೇರೊಂದು ವೆಂಟಿಲೇಟರ್ ಅಳವಡಿಸಲು ತೆಗೆಯಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
    ಆದರೆ, ವೈದ್ಯರ ಹೇಳಿಕೆ ಅಲ್ಲಗಳೆದ ಮೃತಳ ಸಂಬಂಧಿಕರು, ‘ವೆಂಟಿಲೇಟರ್ ಸರಿಯಾಗಿಯೇ ಇತ್ತು. ಆದರೂ ವೈದ್ಯರು ಬೇರೊಂದು ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದು ಏಕೆ? ವೆಂಟಿಲೇಟರ್ ತೆಗೆದು 15-20 ನಿಮಿಷವಾದರೂ ಬೇರೊಂದು ವೆಂಟಿಲೇಟರ್ ಅಳವಡಿಸಲಿಲ್ಲ. ಹೀಗಾಗಿ ರೋಗಿ ಮೃತಪಟ್ಟಿದ್ದಾರೆ’ ಎಂದು ದೂರಿದ್ದಾರೆ.

    ವೆಂಟಿಲೇಟರ್​ನಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಬೇರೊಂದು ವೆಂಟಿಲೇಟರ್ ಅಳವಡಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
    | ಡಾ. ಪಿ.ಎಸ್. ಭೂಸರಡ್ಡಿ, ನಿರ್ದೇಶಕರು, ಗದಗ ಜಿಮ್್ಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts