More

    ‘ಪಠಾಣ್​’ ಚಿತ್ರದ ಟ್ರೈಲರ್​ನಲ್ಲಿ ಸಲ್ಮಾನ್​ ಇಲ್ಲ; ಭರ್ಜರಿ ಆಕ್ಷನ್​ ಇದೆ

    ಮುಂಬೈ: ಕಳೆದ ಕಲೆವು ದಿನಗಳಿಂದ ಬಾಲಿವುಡ್​ನಲ್ಲಿ ‘ಪಠಾಣ್​’ ಚಿತ್ರದ ಟ್ರೈಲರ್​ ಬಗ್ಗೆಯೇ ಮಾತು. ಚಿತ್ರ ಮುಂದಕ್ಕೆ ಹೋಗಿರುವುದರಿಂದ ಟ್ರೈಲರ್​ ಬಿಡುಗಡೆ ಸಹ ಮುಂದಕ್ಕೆ ಹೋಗಿದೆ, ಈ ಚಿತ್ರದ ಎರಡು ಟ್ರೈಲರ್​ಗಳು ಬಿಡುಗಡೆಯಾಗಲಿವೆ, ಒಂದರಲ್ಲಿ ಸಲ್ಮಾನ್​ ಇದ್ದರೆ ಇನ್ನೊಂದರಲ್ಲಿ ಇರುವುದಿಲ್ಲ … ಹೀಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಇವೆಲ್ಲ ಸುದ್ದಿಗಳನ್ನು ಸುಳ್ಳೂ ಮಾಡಿ, ‘ಪಠಾಣ್​’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ನನಗೆ ಬಂದ ಪರಿಸ್ಥಿತಿ ಯಾರಿಗೂ ಬಾರದಿರಲಿ: ಟ್ರೋಲಿಗರಿಗೂ ಒಳ್ಳೆಯದ್ದನ್ನೇ ಬಯಸಿದ ಸಮಂತಾ

    ‘ಪಠಾಣ್​’ ಚಿತ್ರದ ಟ್ರೈಲರ್​ ಇಂದು ಯೂಟ್ಯೂಬ್​ನ ಯಶ್​ರಾಜ್​ ಫಿಲಂಸ್​ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಈ ಟ್ರೈಲರ್​ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಹಿಂದೆಂದೂ ನೋಡಿರದ ಆಕ್ಷನ್​ ದೃಶ್ಯಗಳು ಈ ಚಿತ್ರದಲ್ಲಿದ್ದು, ಶಾರುಖ್​ ಖಾನ್​ ಇಷ್ಟು ವರ್ಷಗಳ ಚಿತ್ರಜೀವನದಲ್ಲಿ ಮೊದಲ ಬಾರಿಗೆ ಔಟ್​ ಅಂಡ್​ ಔಟ್​ ಆಕ್ಷನ್​ ಚಿತ್ರದಲ್ಲಿ ನಟಿಸಿರುವುದು ವಿಶೇಷ.

    ಚಿತ್ರದಲ್ಲಿ ಸಲ್ಮಾನ್​ ಖಾನ್​ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ದರ್ಶನ ಸಹ ಟ್ರೈಲರ್​ನಲ್ಲಾಗಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿತ್ತು. ಆದರೆ, ಈ ಟ್ರೈಲರ್​ನಲ್ಲಿ ಸಲ್ಮಾನ್ ಇಲ್ಲ. ಬದಲಿಗೆ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಹಾಂ ಅವರ ಪಾತ್ರಗಳನ್ನು ಪರಿಚಯಿಸಲಾಗಿದೆ.

    ಇದನ್ನೂ ಓದಿ: ಆಸ್ಕರ್​ ರೇಸ್​ನಲ್ಲಿ ‘ಕಾಂತಾರ’; ಎರಡು ವಿಭಾಗಗಳಲ್ಲಿ ಸ್ಪರ್ಧೆ

    ‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

    ಬರೀ ‘ಕಾಂತಾರ’ ಅಷ್ಟೇ ಅಲ್ಲ, ‘ವಿಕ್ರಾಂತ್​ ರೋಣ’ ಸಹ ಆಸ್ಕರ್​ ಸ್ಪರ್ಧೆಯಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts