More

    ಕೋಳಿತ್ಯಾಜ್ಯದಿಂದ ತಯಾರಿತ ಈ ಬಯೋಡೀಸೆಲ್​ ಕೊಡುತ್ತೆ 38 ಕಿ.ಮೀ. ಮೈಲೇಜ್: ಸಂಶೋಧಕನಿಗೆ ಸಿಕ್ಕಿತು ಪೇಟೆಂಟ್​

    ನವದಹೆಲಿ: ಪಶುವೈದ್ಯರೊಬ್ಬರು ಕೋಳಿತ್ಯಾಜ್ಯದಿಂದ ಬಯೋಡೀಸೆಲ್​ ಕಂಡುಹಿಡಿದಿದ್ದು, ಅದಕ್ಕೀಗ ಪೇಟೆಂಟ್ ಕೂಡ ಸಿಕ್ಕಿದೆ. ಕೇರಳದ ಪಶುವೈದ್ಯಕೀಯ ಕಾಲೇಜೊಂದರ ಅಸೋಸಿಯೇಟ್​ ಪ್ರೊಫೆಸರ್​ ಜಾನ್​ ಅಬ್ರಹಾಂ ಇಂಥದ್ದೊಂದು ಸಂಶೋಧನೆ ನಡೆಸಿದ್ದಾರೆ.

    ಚಿಕನ್​ ಸ್ಟಾಲ್​ ಹಾಗೂ ಹೋಟೆಲ್​ಗಳಲ್ಲಿ ಸಿಗುವ ಕೋಳಿಯ ತ್ಯಾಜ್ಯವನ್ನು ಬಯೋಡೀಸೆಲ್​ ಆಗಿ ಪರಿವರ್ತಿಸುವ ಕುರಿತಂತೆ 2009-12ರ ಅವಧಿಯಲ್ಲೇ ಜಾನ್​ ಸಂಶೋಧನ ನಡೆಸಿ ಯಶಸ್ವಿಯಾಗಿದ್ದರು. ಈ ಬಯೋಡೀಸೆಲ್​ 38 ಕಿ.ಮೀ. ಮೈಲೇಜ್​ ಕೊಡಲಿದ್ದು, ಈಗಿನ ಇಂಧನ ಬಳಕೆಯಿಂದ ಆಗುವ ಮಾಲಿನ್ಯವನ್ನು ಶೇ. 40ರಷ್ಟು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅವರ ಈ ಸಂಶೋಧನೆಗೆ ಜುಲೈ 7ರಂದು ಪೇಟೆಂಟ್ ಲಭಿಸಿದೆ.

    ಹಕ್ಕಿ ಹಾಗೂ ಹಂದಿಗಳಿಂದ ಹೆಚ್ಚಿನ ಫ್ಯಾಟ್​ ಸ್ಯಾಚುರೇಷನ್​ ಲಭ್ಯವಿರುವುದರಿಂದ ಅವುಗಳಿಂದ ಕೊಠಡಿ ಉಷ್ಣತೆಯಲ್ಲೇ ತೈಲವನ್ನು ಸಂಸ್ಕರಿಸಬಹುದು. ಮಾತ್ರವಲ್ಲ, ಚಿಕನ್​ ವೇಸ್ಟ್ ಕಡಿಮೆ ದರದಲ್ಲಿ ಹಾಗೂ ಸುಲಭದಲ್ಲಿ ಲಭಿಸುವುದರಿಂದ ಬಯೋಡೀಸೆಲ್​ ಕಂಡುಹಿಡಿಯಲು ಅದನ್ನು ಬಳಸಿದೆ ಎಂಬುದಾಗಿ ಜಾನ್​ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಯೋಡೀಸೆಲ್​ನಲ್ಲಿ ಹೆಚ್ಚಿನ ಆಮ್ಲಜನಕ ಇರುವುದರಿಂದ ಇಂಜಿನ್ ಕ್ಷಮತೆ ಕೂಡ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

    ಮುಖ್ಯಮಂತ್ರಿ ಬದಲಾವಣೆ ವಿಚಾರ: ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು?

    ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts