More

    ಐಕ್ಯತೆಗೆ ಪಟೇಲ್ ಕೊಡುಗೆ ಅಪಾರ

    ಉಡುಪಿ: ದೇಶದ ಐಕ್ಯತೆ, ಭದ್ರತೆ ಹಾಗೂ ಸಮಗ್ರತೆಗೆ ಸರ್ದಾರ್ ವಲ್ಲಭ ಭಾಯಿ ಪಟೇಲರ ಕೊಡುಗೆ ಅಪಾರ. ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಗಾಂಧೀಜಿಗೆ ಬೆನ್ನೆಲುಬಾಗಿ ನಿಂತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರದ ಏಕತೆಗೆ ಬಗ್ಗೆ ಇದ್ದ ಬಲವಾದ ಬದ್ಧತೆಯನ್ನು ದೇಶ ಮರೆಯಬಾರದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ದಿ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮದಿನಾಚರಣೆ, ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಕಿಸಾನ್ ಅಧಿಕಾರ್ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    15 ವರ್ಷ ದೇಶದ ಪ್ರಧಾನಿಯಾಗಿ ಕ್ರಾಂತಿಕಾರಿಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ ಇಂದಿರಾ ಗಾಂಧಿ ಬಡತನದಲ್ಲಿರುವ ಮಕ್ಕಳು ಮಾನಸಿಕ, ಶೈಕ್ಷಣಿಕ, ದೈಹಿಕವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಅಂಗನವಾಡಿ ಶಾಲೆಯನ್ನು ಪ್ರಾರಂಭಿಸಿದ್ದರು. ಈ ಮೂಲಕ ಬಡತನ ನಿರ್ಮೂಲನೆ ಹಾಗೂ ಸ್ವಾವಂಬನೆಯ ಬದುಕಿಗಾಗಿ, ಪಡಿತರ, ಮಾಸಾಶನ, ಭೂ ಮಸೂದೆಯಂತಹ ಕ್ರಾಂತಿಕಾರಿಕ ಯೋಜನೆ ಜಾರಿಗೊಳಿಸಿದ್ದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಕಿಸಾನ್ ಘಟಕದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಕುಂದಾಪುರ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಭುಜಂಗ ಶೆಟ್ಟಿ ಮಾತನಾಡಿದರು. ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮುಖಂಡರಾದ ಬಿ. ನರಸಿಂಹ ಮೂರ್ತಿ, ವೆರೋನಿಕಾ ಕರ್ನೇಲಿಯೋ, ಭಾಸ್ಕರ್ ರಾವ್ ಕಿದಿಯೂರು, ಹರೀಶ್ ಕಿಣಿ, ಶಬ್ಬೀರ್ ಅಹ್ಮದ್, ರಮೇಶ್ ಕಾಂಚನ್, ರೋಶನಿ ಒಲಿವರ್, ಜ್ಯೋತಿ ಹೆಬ್ಬಾರ್, ಚಂದ್ರಿಕಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಇಸ್ಮಾಯಿಲ್ ಆತ್ರಾಡಿ, ಉದ್ಯಾವರ ನಾಗೇಶ್ ಕುಮಾರ್, ವಿಶ್ವಾಸ್ ಅಮೀನ್, ಸೌರಬ್ ಬಲ್ಲಾಳ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಸ್ವಾಗತಿಸಿದರು, ಪ್ರ. ಕಾರ್ಯದರ್ಶಿ ವೈ.ಸುಕುಮಾರ್ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಅಣ್ಯಯ್ಯ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts