More

    7,399 ಪ್ರಯಾಣಿಕರ ಹಾರಾಟ, ಮಂಗಳೂರು ವಿಮಾನ ನಿಲ್ದಾಣ ದಾಖಲೆ

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.19ರಂದು 26 ಆಗಮನ ಮತ್ತು 25 ನಿರ್ಗಮನ ವಿಮಾನಗಳಲ್ಲಿ 7,399 ಪ್ರಯಾಣಿಕರು ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ.

    ಇದರಲ್ಲಿ ಕ್ರಮವಾಗಿ 3,527 ಆಗಮಿಸಿದ ಮತ್ತು 3,872 ನಿರ್ಗಮಿಸಿದ ಪ್ರಯಾಣಿಕರು ಸೇರಿದ್ದಾರೆ. ಇದು 2020ರ ಅ.31ರ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ (ಸಿಒಡಿ) ಮಂಗಳೂರು ವಿಮಾನ ನಿಲ್ದಾಣ ನಿರ್ವಹಿಸಿದ ಅತಿ ಹೆಚ್ಚು ದೈನಂದಿನ ಪ್ರಯಾಣಿಕರ ಸಂಖ್ಯೆ. ನವೆಂಬರ್ 2021ರ ನಂತರ ವಿಮಾನ ನಿಲ್ದಾಣ 7ಸಾವಿರ ಪ್ರಯಾಣಿಕರ ದೈನಂದಿನ ನಿರ್ವಹಣೆಯ ಗಡಿ ದಾಟಿರುವುದು ಇದೇ ಮೊದಲು.

    ವಿಮಾನಯಾನ ಸಂಸ್ಥೆ-ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನ.19ರಂದು ದಾಖಲಿಸಿದ ಲೋಡ್ ಅಂಶವೂ ಏರಿಕೆ ದಾಖಲಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಲೋಡ್ ಅಂಶ ಶೇ.79 ಆಗಿದ್ದರೆ, ನಿರ್ಗಮಿಸುವ ವಿಮಾನಗಳಲ್ಲಿ ಇದು ಶೇ.91ಕ್ಕೆ ಏರಿದೆ. ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದ ಅ.29ರಿಂದ ವಿಮಾನ ಸಂಚಾರ ಚಲನೆಯಲ್ಲಿನ ಹೆಚ್ಚಳ ಪ್ರಯಾಣಿಕರ ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹಬ್ಬದ ಋತುವಿನಲ್ಲಿ ವ್ಯಾಪಾರ ಮತ್ತು ವಿರಾಮ ಪ್ರಯಾಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಜನಸಂದಣಿಗೆ ಕಾರಣವಾಗಿದೆ. ಈ ವಿಮಾನ ನಿಲ್ದಾಣ ಕ್ರಮವಾಗಿ 9 ದೇಶೀಯ, 6 ನೇರ ಸೇರಿದಂತೆ ಏಳು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.

    ದಿನಕ್ಕೆ ಸರಾಸರಿ 5,200 ಪ್ರಯಾಣಿಕರು

    ಮಂಗಳೂರು-ಪುಣೆ ವಲಯದಲ್ಲಿ ವಿಮಾನ ಪುನರಾರಂಭ ಮತ್ತು ನೆರೆಯ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ ದಿನದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. 2021ರ ನ.27ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 7,084 ಪ್ರಯಾಣಿಕರು, 2021ರ ನ.6 ಮತ್ತು 20ರಂದು 7,168 ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದರು. 2022-23ರ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣ ದಿನಕ್ಕೆ ಸರಾಸರಿ 5,200 ಪ್ರಯಾಣಿಕರನ್ನು ನಿರ್ವಹಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts