ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಪಾರು ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿತ್ತಿರುವ ಅನುಷ್ಕಾ ಪಾತ್ರಧಾರಿ ಮಾನಸಿ ಜೋಶಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನ್ನ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಅಸಭ್ಯ ಸಂದೇಶಗಳನ್ನು ರವಾನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಬದುಕಿದ್ದಾಗ ಅನೇಕರ ಜೀವ ಉಳಿಸಿ, ಸತ್ತ ಮೇಲೂ 8 ಮಂದಿಗೆ ಆಸರೆಯಾದವನ ಮನಕಲಕುವ ಕತೆ ಇದು!
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಮಾನಸಿ, ಹಲೋ ನನ್ನ ಇನ್ಸ್ಟಾಗ್ರಾಂ ಕುಟುಂಬದವರೇ (ಅಭಿಮಾನಿಗಳು), ನಾನು ಈ ಪೋಸ್ಟ್ ಹಾಕುತ್ತಿರುವ ಉದ್ದೇಶ ನಾನಿಂದು ತುಂಬಾ ಚಿಂತೆಗೀಡಾಗಿದ್ದೇನೆ. ನಾನೊಬ್ಬಳೇ ಮಾತ್ರವಲ್ಲ ಅನೇಕ ಕಲಾವಿದರೂ ಹಾಗೂ ಹುಡುಗಿಯರು ಸಹ ಇದೇ ಕಹಿ ಅನುಭವವನ್ನು ಹೊಂದಿದ್ದಾರೆ.
ಮಾನಸಿ ಜೋಶಿ ಫ್ಯಾನ್ಡಂ ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ತೆರೆದು ನನ್ನ ಬಗೆಗಿನ ಸ್ಟೋರಿಗಳನ್ನು ಹಾಕುತ್ತಿದ್ದಾರೆ. ಇಷ್ಟಿದ್ದರೆ ಏನಾಗುತ್ತಿರಲಿಲ್ಲ. ಆದರೆ, ನನ್ನ ಮೊಬೈಲ್ ನಂಬರ್ ಹಾಗೂ ಇನ್ಸ್ಟಾಗ್ರಾಂಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಿರುವುದಲ್ಲದೇ ಅವರನ್ನು ನನ್ನ ಖಾತೆಯ ಅಡ್ಮಿನ್ ಆಗಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸಾಧ್ಯವಿಲ್ಲ ಎಂದಿದ್ದಕ್ಕೆ, ನನ್ನ ವಿರುದ್ಧ ಅಸಭ್ಯ ಸಂದೇಶಗಳನ್ನು ಹರಿಬಿಡಲು ಆರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಒಂದೊಮ್ಮೆ ಇಂತಹ ಪೋಸ್ಟ್ಗಳು ನಿಮ್ಮ ಎದುರಿಗೆ ಬಂದಾಗ ಅವುಗಳನ್ನು ಸೈಬರ್ ಕ್ರೈಂಗೆ ವರದಿ ನೀಡಿ. ವಿಶೇಷವಾಗಿ ಇಂತ ಭಯಾನಕ ಕೃತ್ಯಗಳಿಂದ ಕಲಾವಿದರು ಹಾಗೂ ಮಹಿಳೆಯರನ್ನು ರಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ನೀವು ನಮಗೆ ಸಹಾಯ ಮಾಡುತ್ತೀರಾ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ಮಾನುಶಿ ಸಹ ಕಿಡಿಗೇಡಿಗಳ ವಿರುದ್ಧ ಪೊಲೀಸರ ಮೊರೆ ಹೋಗಿದ್ದಾರೆ.
https://www.instagram.com/p/CC0bwq1llHR/