More

    ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸೋನಿಯಾ ಗಾಂಧಿ ಒಪ್ಪಿಗೆ ಇರಲಿಲ್ಲ…ಒಮ್ಮೆ ಆ ಪಕ್ಷ ನಮಗೆ ಕೊಟ್ಟ ಭರವಸೆ ತಪ್ಪಿದರೆ ಒಂದು ಕ್ಷಣವೂ ಇರುವುದಿಲ್ಲ..

    ಮುಂಬೈ: ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನೆ ನೇತೃತ್ವದ ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.

    ಮೂರು ಪಕ್ಷಗಳ ಸಿದ್ಧಾಂತಗಳು ಭಿನ್ನವಾಗಿದ್ದರೂ ಒಟ್ಟಾಗಿ ಸೇರಿ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿವೆ.

    ಹೀಗಿರುವಾಗ ಹಿರಿಯ ಕಾಂಗ್ರೆಸ್​ ನಾಯಕ ಹಿರಿಯ ಕಾಂಗ್ರೆಸ್​ ನಾಯಕ, ಲೋಕೋಪಯೋಗಿ ಸಚಿವ ಅಶೋಕ್​ ಚೌಹಾಣ್​ ಈಗೊಂದು ಸತ್ಯ ಹೇಳಿದ್ದಾರೆ.

    ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಇರಲಿಲ್ಲ ಎಂಬುದನ್ನು ಈಗ ಹೇಳಿದ್ದಾರೆ.

    ಗಣರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸೇರಿಕೊಳ್ಳಲು ಸೋನಿಯಾ ಗಾಂಧಿಯವರನ್ನು ಒಪ್ಪಿಸುವ ಅನಿವಾರ್ಯತೆ ರಾಜ್ಯದ ಕಾಂಗ್ರೆಸ್​​ ನಾಯಕರಿಗೆ ಇತ್ತು. ಯಾವಾಗ ಬಿಜೆಪಿ ಮತ್ತು ಶಿವಸೇನಾ ತಮ್ಮ ಮಧ್ಯದ ಸಂಘರ್ಷಗಳನ್ನು ರಾಜಿಮಾಡಿಕೊಳ್ಳಲಿಲ್ಲವೋ ಆಗ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದರು ಎಂದು ಚೌಹಾಣ್​ ತಿಳಿಸಿದರು.

    ಆದರೆ ಸೋನಿಯಾ ಗಾಂಧಿ ಸುಲಭಕ್ಕೆ ಒಪ್ಪಲಿಲ್ಲ. ಮಹಾ ವಿಕಾಸ ಅಘಾಡಿ ಮೈತ್ರಿ ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿ, ಅದರ ಚೌಕಟ್ಟಿನಲ್ಲಿಯೇ ಆಡಳಿತ ನೀಡುತ್ತದೆ ಎಂದು ಶಿವಸೇನೆಯಿಂದ ಲಿಖಿತ ಭರವಸೆಯನ್ನು ಕಾಂಗ್ರೆಸ್​ ಮೊದಲು ಪಡೆಯಬೇಕು ಎಂದು ಅವರು ನಮಗೆ ಸೂಚಿಸಿದ್ದರು. ಮೂರು ಪಕ್ಷಗಳ ಸಿದ್ಧಾಂತಗಳಲ್ಲಿ ಭಿನ್ನತೆ ಇರುವುದೇ ಇದಕ್ಕೆ ಕಾರಣವಾಗಿತ್ತು ಎಂದು ಹೇಳಿದರು.

    ಅಷ್ಟೇ ಅಲ್ಲದೆ, ಮಹಾ ವಿಕಾಸ್​ ಅಘಾಡಿ ಯಾವತ್ತು ಸಂವಿಧಾನದ ಆಶಯಗಳನ್ನು ಮೀರುತ್ತದೆಯೋ ಅಂದೇ ಕಾಂಗ್ರೆಸ್​ ಮೈತ್ರಿಯಿಂದ ಹೊರಬರುತ್ತದೆ. ಒಂದು ಸೆಕೆಂಡ್​ ಕೂಡ ಇರುವುದಿಲ್ಲ ಎಂದೂ ತಿಳಿಸಿದರು.
    ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್​ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಂವಿಧಾನ ಬದ್ಧವಾಗಿ ಆಡಳಿತ ನಡೆಸುತ್ತೇವೆ ಎಂದು ಉದ್ಧವ್ ಠಾಕ್ರೆ ಕೂಡ ನಮಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts