More

    ಪಕ್ಷ ಬಿಟ್ಟವರ ಸದಸ್ಯತ್ವ ರದ್ದತಿಗೆ ಕ್ರಮ

    ಬೋರಗಾಂವ: ಬಿಜೆಪಿಯಿಂದ ಚುನಾಯಿತರಾಗಿ ಅಧಿಕಾರದ ಆಮಿಷದಿಂದ ನಾಲ್ಕು ಪುರಸಭೆ ಸದಸ್ಯರು ಕಾಂಗ್ರೆಸ್ ಪಾಲಾಗಿದ್ದು, ಓರ್ವ ಸದಸ್ಯನ ಮೀಸಲಾತಿ ಬಗ್ಗೆ ಅಕ್ಷೇಪವಿದೆ. ಪಕ್ಷಾಂತರ ಮಾಡಿರುವ ಸದಸ್ಯರ ಬಿಜೆಪಿ ಸದಸ್ಯತ್ವ ರದ್ದುಗೊಳಿಸಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ ಪಕ್ಷದ ಹಿರಿಯರಲ್ಲಿ ಮನವಿ ಮಾಡಲಿದ್ದೇವೆ. ಸದಲಗಾ ಪುರಸಭೆ ಮತ್ತೆ ಬಿಜೆಪಿ ಪಾಲಾಗಲಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

    ಸಮೀಪದ ಸದಲಗಾ ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪುರಸಭೆ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಬಿಜೆಪಿ ಸೋಲು ಅನುಭವಿಸಿದೆ. ನಾಲ್ಕು ಸದಸ್ಯರು ಪಕ್ಷಕ್ಕೆ ದ್ರೋಹ ಮಾಡಿ ಅಧಿಕಾರದ ಆಮಿಷದಿಂದ ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಇದರಿಂದ ಬಿಜೆಪಿಗೆ ಜಯ ಸಿಕ್ಕಿಲ್ಲ. ಮುಂದಿನ ಎರಡು ತಿಂಗಳುಗಳಲ್ಲಿ ನಾಲ್ಕು ಜನರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಸದಲಗಾ ಪುರಸಭೆ ಮತ್ತೆ ಬಿಜೆಪಿಗೆ ಒಲಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ನಾಲ್ಕು ಜನ ಸದಸ್ಯರು ಪಕ್ಷಾಂತರ ಮಾಡಿದ್ದರಿಂದ ಕೇವಲ ಒಂದು ಮತದಿಂದ ಬಿಜೆಪಿಗೆ ಸೋಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ನಾಲ್ಕು ಸದಸ್ಯರು ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ನ್ಯಾಯಾಲಯದ ತೀರ್ಮಾನದ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಪಕ್ಷೇತರವಾಗಿ ಚುನಾಯಿತರಾಗಿದ್ದ ಅಭಿಜಿತ ಪಾಟೀಲ ಮತ್ತು ಬಸವರಾಜ ಹಣಬರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು. ಮುಖಂಡ ಪ್ರಕಾಶ ಪಾಟೀಲ, ರಾಮಗೊಂಡ ಪಾಟೀಲ, ಚೇತನ ಪಾಟೀಲ, ಕೇತನ ಪಾಟೀಲ, ರಾಜು ಅಮೃತ್ಸಣ್ಣವರ, ಪುರಸಭೆ ಸದಸ್ಯರಾದ ಅಭಿಜಿತ ಪಾಟೀಲ, ಬಸವರಾಜ ಹಣಬರ, ಪ್ರಶಾಂತ ಕರಂಗಲೆ, ಲಕ್ಷ್ಮೀಕಾಂತ ಹಲಪ್ಪನವರ, ಆನಂದ ಪಾಟೀಲ, ಲಕ್ಷ್ಮೀ ನಿಡಗುಂದಿ, ದರಪ್ಪ ಹವಾಲ್ದಾರ್, ಹೇಮಂತ ಸಿಂಗೆ, ಮನುಜ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts