More

    ಎಸ್ಟಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಿ

    ಬಂಕಾಪುರ: ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ 2020ರ ಜ. 15ರಂದು ಕಾಗಿನೆಲೆ ಮಠದಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಸಮಾಜದ ಜನರು ಪಾಲ್ಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

    ಪಟ್ಟಣದ ಕೆಂಡಮಠದ ಆವರಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ವಿುಕವಾಗಿ ಹಿಂದುಳಿದಿರುವ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಪಡೆಯವ ಅರ್ಹತೆಯಿದೆ. ಮೀಸಲಾತಿ ನೀಡಲು ದೆಹಲಿ ಮಟ್ಟದಲ್ಲಿ ಸಂಬಂಧಪಟ್ಟ ಇಲಾಖೆ, ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

    ಈ ಹಿಂದೆ ಬ್ರಿಟಿಷ್ ಸರ್ಕಾರದಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಘೊಷಣೆಯಾಗಿದೆ. ಪ್ರಾಂತ್ಯವಾರು ಮೀಸಲಾತಿ ಈಗಲೂ ಜಾರಿಯಲ್ಲಿದೆ. ಹೀಗಾಗಿ ರಾಜ್ಯದ ಕುರುಬ ಸಮಾಜದವರಿಗೂ ಎಸ್ಟಿ ಮೀಸಲಾತಿ ಲಾಭ ಸಿಗಬೇಕು. ಈ ನಿಟ್ಟಿನಲ್ಲಿ 2020ರ ಜನವರಿ 15ರಂದು ಕಾಗಿನೆಲೆ ಕನಕಗುರು ಪೀಠದಿಂದ ಬೆಂಗಳೂರಿನವರೆಗೆ ಜಗದ್ಗುರು ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ನಡೆಯವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ಕೆಂಡದಮಠದ ಸಿದ್ದಯ್ಯ ಶ್ರೀಗಳು, ಸಮಾಜದ ಮುಖಂಡರಾದ ಶಿವಾನಂದ ರಾಮಗೇರಿ, ಸತೀಶ ಆಲದಕಟ್ಟಿ, ಭೋಜರಾಜ ಕರೋಧಿ, ಎಂ.ಎಸ್. ಹಳವಳ್ಳಿ, ಎಂ.ಎನ್. ಹೊನಕೇರಿ, ಮಲ್ಲಪ್ಪ ಕಟಗಿ, ಶಿವು ಈರಪ್ಪನವರ, ನಿಂಗಪ್ಪ ಮಾಯಣ್ಣವರ, ಲಿಂಗರಾಜ ಹಳವಳ್ಳಿ, ಗುಡ್ಡಪ್ಪ ಮತ್ತೂರು, ನೀಲಪ್ಪ ಕುರಿ, ಯಲ್ಲಪ್ಪ ಸುಂಕದ, ಕುರಬ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಫಕೀರಪ್ಪ ಕುಂದೂರು, ಮೈಲಾರೆಪ್ಪ ತಳ್ಳಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    ಇದಕ್ಕೂ ಪೂರ್ವದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಕೆಂಡದಮಠದ ಶ್ರೀಗಳು ಸನ್ಮಾನಿಸಿ, ಆರ್ಶೀವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts