More

    ಮಾಜಿ ಸಚಿವ ಪಾರ್ಥ ಚಟರ್ಜಿ, ನಟಿ ಅರ್ಪಿತಾ ಮುಖರ್ಜಿ ಇಬ್ಬರೂ ಜೈಲಿಗೆ, ಆ. 18ರವರೆಗೂ ನ್ಯಾಯಾಂಗ ಬಂಧನ..

    ಕೋಲ್ಕತ: ಉದ್ಯೋಗ ನೇಮಕಾತಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಪಾರ್ಥ ಮುಖರ್ಜಿ ಹಾಗೂ ನಟಿ ಅರ್ಪಿತಾ ಮುಖರ್ಜಿ ಇಬ್ಬರಿಗೂ ಆ. 18ರ ವರೆಗೂ ಜೈಲೇ ಗತಿ ಎನ್ನುವಂತಾಗಿದೆ. ಜಾರಿ ನಿರ್ದೇಶನಾಲಯದ ಕಸ್ಟಡಿಯಿಂದ ಅವರಿಂದು ಮುಕ್ತವಾಗಿದ್ದು, ಆ. 18ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರುವಂತಾಗಿದೆ.

    ಸ್ಕೂಲ್ ಸರ್ವಿಸ್ ಕಮಿಷನ್ (ಎಸ್​ಎಸ್​ಸಿ) ನೇಮಕಾತಿ ಹಗರಣದಲ್ಲಿ ಸಿಲುಕಿಕೊಂಡಿರುವ ಇವರ ಪ್ರಕರಣವನ್ನು ಇಂದು ವಿಚಾರಣೆ ನಡೆಸಿದ ಕೋಲ್ಕತ ವಿಶೇಷ ನ್ಯಾಯಾಲಯ ಇವರಿಗೆ ಆ. 18ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅರ್ಪಿತಾ ಮುಖರ್ಜಿಗೆ ಜೀವ ಬೆದರಿಕೆ ಇರುವುದರಿಂದ ಆಕೆಯನ್ನು ನಾಲ್ವರಿಗಿಂತ ಹೆಚ್ಚು ಕೈದಿಗಳು ಇರುವ ಜೈಲಲ್ಲಿ ಇಡುವುದು ಸೂಕ್ತವಲ್ಲ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ತಿಳಿಸಿದೆ. ಮುಖರ್ಜಿಯ ವಕೀಲರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಕೆಗೆ ನೀಡುವ ನೀರು ಆಹಾರ ಪರಿಶೀಲಿಸಿಯೇ ಕೊಡುವಂತೆ ಕೋರಿದ್ದಾರೆ.

    ಪಾರ್ಥ ಚಟರ್ಜಿ ಕೋಲ್ಕತದ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದು, ಶಾಲಾ ನೇಮಕಾತಿ ಹಗರಣವೊಂದರಲ್ಲಿ ಸಿಲುಕಿ ಜುಲೈ 23ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದರು. ಸಚಿವರ ನಿಕಟವರ್ತಿ ಅರ್ಪಿತಾ ಫ್ಲ್ಯಾಟ್​ನಲ್ಲಿ 21 ಕೋಟಿ ರೂ. ನಗದು, ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ನಂತರ ಜುಲೈ 27ರಂದು ಇನ್ನೊಂದು ದಾಳಿಯಲ್ಲಿ ಮತ್ತೊಂದು ಫ್ಲ್ಯಾಟ್​ನಲ್ಲಿ 27.9 ಕೋಟಿ ರೂ. ನಗದು, ಚಿನ್ನಾಭರಣ ಸಿಕ್ಕಿತ್ತು. ಹಗರಣ ನಡೆದ ಸಂದರ್ಭದಲ್ಲಿ ಚಟರ್ಜಿ ಬಂಗಾಳದ ಶಿಕ್ಷಣ ಸಚಿವರಾಗಿದ್ದರು.

    ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts