More

    ಯೆಸ್​ ಬ್ಯಾಂಕ್​ ಸಂಸ್ಥಾಪಕನ ಬೆನ್ನತ್ತಿದ ಇ.ಡಿ., ಸಿಬಿಐ ಅಧಿಕಾರಿಗಳು; ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಪುತ್ರಿ ರೋಶಿಣಿ ಕಪೂರ್​

    ಮುಂಬೈ: ಯೆಸ್ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ರನ್ನು ಭಾನುವಾರ (ಮಾ. 8) ಮುಂಜಾನೆ ಅರೆಸ್ಟ್​ ಮಾಡಿದ್ದ ಇ.ಡಿ.ಅಧಿಕಾರಿಗಳು ಮುಂಬೈ ಸೆಷನ್ಸ್​ ಕೋರ್ಟ್​ಗೆ ಹಾಜರು ಪಡಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಾಲಯ ಮಾ.11ರವರೆಗೆ ರಾಣಾ ಅವರನ್ನು ಇ.ಡಿ.ವಶಕ್ಕೆ ನೀಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಬಿಐ ಕೂಡ ಅವರ ವಿರುದ್ಧ ಎಫ್​ಐಆರ್ ದಾಖಲು ಮಾಡಿದೆ.

    ದಿವಾನ್ ಹೌಸಿಂಗ್​ ಫೈನಾನ್ಸ್​ ಕಾರ್ಪೋರೇಶನ್​ (ಡಿಎಚ್​ಎಫ್​ಎಲ್​), ಯೆಸ್​ ಬ್ಯಾಂಕ್ ಮತ್ತು ರಾಣಾ ಕಪೂರ್​ ಅವರ ಪುತ್ರಿಯರ ಮಾಲೀಕತ್ವದ ಕಂಪನಿಗಳ​ ನಡುವೆ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಶಂಕೆಯಡಿ ಸಿಬಿಐ ಕೂಡ ವಿಚಾರಣೆ ಕೈಗೆತ್ತಿಕೊಂಡಿದೆ.

    ಈ ಮಧ್ಯೆ ಯೆಸ್​ ಬ್ಯಾಂಕ್ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳು ಹೇಳುತ್ತಿವೆ.
    ಸಿಬಿಐ ರಾಣಾ ಕಪೂರ್​ ವಿರುದ್ಧ ಎಫ್​ಐಆರ್​ ದಾಖಲು ಮಾಡುತ್ತಿದ್ದಂತೆ ಇ.ಡಿ. ಅಧಿಕಾರಿಗಳು ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್)ನ್ನು ದಾಖಲಿಸಿದ್ದಾರೆ.

    ದೇಶ ಬಿಟ್ಟು ಹೊರಟಿದ್ದ ರಾಣಾ ಪುತ್ರಿ

    ಯೆಸ್​ ಬ್ಯಾಂಕ್​ ದಿವಾಳಿಗೆ ಸಂಬಂಧಪಟ್ಟಂತೆ ರಾಣಾ ಕಪೂರ್​ ಅವರ ಪತ್ನಿ ಬಿಂದು ಕಪೂರ್​, ಪುತ್ರಿಯರು ಹಾಗೂ ಅಳಿಯನನ್ನು ಇ.ಡಿ. ಶನಿವಾರ ವಿಚಾರಣೆಗೆ ಒಳಪಡಿಸಿದೆ. ಅಷ್ಟಾದ ಕೂಡಲೇ ರಾಣಾ ಅವರ ಪುತ್ರಿ ರೋಶಿನಿ ಕಪೂರ್​ ಮಾ.8ರಂದು ಲಂಡನ್​ಗೆ ತೆರಳಲು ಸಜ್ಜಾಗಿದ್ದರು. ವಿಮಾನ ಏರಲು ಮುಂಬೈ ಏರ್​ಪೋರ್ಟ್​ಗೆ ಬಂದ ಅವರನ್ನು ಅಧಿಕಾರಿಗಳು ತಡೆದಿದ್ದಾರೆ.

    ರಾಣಾ ಕಪೂರ್​ ಹಾಗೂ ಅವರ ಕುಟುಂಬಕ್ಕೆ ಇ.ಡಿ.ಈಗಾಗಲೇ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ್ದು, ಅದರ ಅನ್ವಯ ದೇಶಬಿಟ್ಟು ಹೋಗುವಂತಿಲ್ಲ. (ಏಜೆನ್ಸೀಸ್​)

    ಯೆಸ್​ ಬ್ಯಾಂಕ್ ಸಂಸ್ಥಾಪಕನಿಗೆ ಪೀಕಲಾಟ; ಸದ್ಯಕ್ಕೆ ತಪ್ಪುವಂತೆ ಕಾಣುತ್ತಿಲ್ಲ ಇ.ಡಿ. ಹಿಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts