More

    ಜನವರಿ ಅಂತ್ಯಕ್ಕೆ ಬಿಜೆಪಿ ಪಟ್ಟಿ; ಲೋಕಸಭೆ ಚುನಾವಣೆಗೆ ಕಾರ್ಯತಂತ್ರ; ಹೊಸ ಜೋಷ್‌ನಲ್ಲಿ ಸಜ್ಜಾದ ಕಮಲ ಪಡೆ

    ಬೆಂಗಳೂರು:
    ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಪಟ್ಟಿಯನ್ನು ಮಾಸಾಂತ್ಯದಲ್ಲಿಯೇ ಅಂತಿಮಗೊಳಿಸಲು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.
    ಸತತವಾಗಿ 2 ದಿನಗಳ ಕಾಲ ಲೋಕಸಭೆ ಚುನಾವಣೆ ಸಿದ್ಧತೆಗೆ ಕ್ಲಸ್ಟರ್‌ವಾರು ನಡೆದ ಸಭೆ, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಚುನಾವಣಾ ಹೋರಾಟಕ್ಕೆ ಪಕ್ಷದ ವೇದಿಕೆ ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದೆ.
    ೆಬ್ರವರಿ ಮೊದಲ ವಾರದಲ್ಲಿಯೇ ಅಭ್ಯರ್ಥಿಗಳನ್ನು ೋಷಣೆ ಮಾಡಬೇಕು ಎನ್ನುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಗಿದೆ. ಜಿಲ್ಲಾ ಘಟಕಗಳು ಸೂಚಿಸುವ ಸರ್ವಸಮ್ಮತ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.
    ಯಾರಿಗೆ ಟಿಕೆಟ್ ನೀಡಿದರೂ, ನಾವೊಬ್ಬರು ಕಾರ್ಯಕರ್ತ ಎಂದು ಪರಿಭಾವಿಸಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಬೇಕು ಎಂಬ ಮಾಹಿತಿಯನ್ನು ಸಭೆಯಲ್ಲಿ ಪರಿಣಾಮಕಾರಿಯಾಗಿ ರವಾನಿಸಲಾಗಿದೆ.

    ಮುಂದುವರಿದ ವಿರೋಧ
    ಲೋಕಸಭಾ ಕ್ಷೇತ್ರವಾರು ಸಭೆಗಳು ನಡೆಯುವ ಸಂದರ್ಭದಲ್ಲಿ ಕೆಲ ಕ್ಷೇತ್ರಗಳ ಸಂಸದರ ಬಗ್ಗೆ ಅಸಮಾಧಾನಗಳು ಸಭೆಯಲ್ಲಿ ವ್ಯಕ್ತವಾಗಿವೆ. ಗೆದ್ದ ಮೇಲೆ ಸಂಸದರು ಕ್ಷೇತ್ರವನ್ನು ಮರೆತಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಇತ್ತ ಬಂದಿದ್ದಾರೆ. ಕಾರ್ಯಕರ್ತರನ್ನು ಕಡೆಗಣಿಸಿ ನಡೆದುಕೊಂಡಿರುವ ಸಂಸದರಿಗೆ ಟಿಕೆಟ್ ನೀಡುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.
    ಚಿಕ್ಕಮಗಳೂರು ಉಡುಪಿ ಕ್ಷೇತ್ರ, ಉತ್ತರ ಕನ್ನಡ, ಹಾವೇರಿ ಸೇರಿದಂತೆ ಕೆಲ ಕ್ಷೇತ್ರಗಳ ಸಂಸದರ ಬಗ್ಗೆ ಅಸಮಾಧಾನವೂ ಕೇಳಿಬಂದಿದೆ.

    ಸಭೆಯಲ್ಲಿ ವಿರೋಧ ಬೇಡ
    ಸಭೆಯಲ್ಲಿ ಯಾರಿಗೂ ವಿರೋಧ ಮತ್ತು ಪರ ಎನ್ನುವುದು ಬೇಡ. ಇದು ಕೇವಲ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ಅಷ್ಟೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕೇಂದ್ರದ ನಾಯಕರಿಗೆ ಸಂಕ್ಷಿಪ್ತವಾಗಿ ವರದಿ ಕಳುಹಿಸಿಕೊಡಲಾಗುವುದು. ಆದ್ದರಿಂದ ವಾದ ವಿವಾದ ಏನೇ ಬೇಡ ಎಂದು ಅಧ್ಯಕ್ಷ ವಿಜಯೇಂದ್ರ ಮೊದಲೇ ಕಡಕ್ಕಾಗಿ ಸೂಚನೆ ನೀಡಿದ್ದರಿಂದ ಹೆಚ್ಚಿನ ಗೊಂದಲಕ್ಕೆ ಆಸ್ಪದವಾಗಿಲ್ಲ. ಶಿವಮೊಗ್ಗ ಸೇರಿದಂತೆ ಇನ್ನುಳಿದ ಕ್ಷೇತ್ರಗಳ ಬಗ್ಗೆ ಯಾವುದೇ ಅಪಸ್ವರ ಸಭೆಯಲ್ಲಿ ಕೇಳಿಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

    18ಕ್ಕೆ ರಾಜ್ಯ ಕಾರ್ಯಕಾರಿ
    ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಮೊದಲ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯನ್ನು ಜ.18ರಂದು ಅರಮನೆ ಮೈದಾನದಲ್ಲಿ ನಡೆಸಲು ನಿರ್ಣಯಿಸಲಾಗಿದೆ.

    ಮೈತ್ರಿ ಪರಿಣಾಮ ಬಗ್ಗೆ ಚರ್ಚೆ
    ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯಲ್ಲಿ ಸ್ಪರ್ಧೆ ಮಾಡಿದರೂ ಅವರ ಮೈತ್ರಿ ಯಶಸ್ವಿ ಗೆಲುವು ಸಾಧಿಸಲು ಆಗಲಿಲ್ಲ. ಜೆಡಿಎಸ್ ಜೊತೆಗೆ ನಮ್ಮ ಮೈತ್ರಿ ಯಶಸ್ವಿ ಹೆಜ್ಜೆಯಾಗಬೇಕು. ಆ ವಿಷಯದಲ್ಲಿ ಹಿಂದೆ ಎಲ್ಲೆಲ್ಲಿ ವ್ಯತ್ಯಾಸಗಳಾಗಿವೆ ಮತ್ತು ತಳಮಟ್ಟದಲ್ಲಿ ಸಮಸ್ಯೆ ಏನು ಎನ್ನುವುದನ್ನು ಪರಾಮರ್ಶೆ ಮಾಡಿ ನಾವು ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

    ೆಬ್ರವರಿಗೆ ಪಟ್ಟಿ ಸಾಧ್ಯತೆ
    ಕಾರ್ಯಕರ್ತರಿಗೆ ಮನ್ನಣೆ ನೀಡುವ ಪಕ್ಷ ಬಿಜೆಪಿ ಎನ್ನುವ ಮಾಹಿತಿಯನ್ನು ಲೋಕಸಭೆ ಚುನಾವಣೆ ಈ ಬಾರಿ ಸಾಭೀತುಪಡಿಸಲಿದೆ ಎಂದು ಕೇಂದ್ರ ನಾಯಕರು ಹೇಳಿದ್ದಾರೆ. ಆದ್ದರಿಂದ ಹಾಲಿ ಇದ್ದವರಿಗೆ ಟಿಕೆಟ್ ಗ್ಯಾರಂಟಿ ಎನ್ನುವ ವಿಶ್ವಾಸವ್ಲಿ. ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆಯೇ ಹೆಚ್ಚಗಿದ್ದು, ಪಕ್ಷದಲ್ಲಿ ಹೊಸ ಹುರುಪು ಮೂಡುತ್ತಿದೆ ಎನ್ನುವುದು ಸಭೆಯಲ್ಲಿ ಭಾಗವಹಿಸಿದ್ದವರ ಅಭಿಮತ. ೆಬ್ರವರಿ ಎರಡನೇ ವಾರದಲ್ಲಿ ಪಟ್ಟಿ ಬಹುತೇಕ ಅಂತಿಮವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಶೋಭಾ, ಹೆಬ್ಬಾರ್ ಗೈರು
    ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಚರ್ಚೆ ನಡೆಯುವ ಸಂದರ್ಭದಲ್ಲಿ ಸಚಿವ ಶೋಭಾ ಕರಂದ್ಲಾಜೆ,
    ಉತ್ತರ ಕನ್ನಡ ಜಿಲ್ಲೆಯ ಚರ್ಚೆ ನಡೆಯುವ ಸಂದರ್ಭದಲ್ಲಿ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಗೈರು ಹಾಜರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts