More

    ಗದ್ದಲ, ಪ್ರತಿಪಕ್ಷಗಳ ಸಭಾತ್ಯಾಗ: ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು, ಬಿಜೆಪಿ ಸಂಸದ ಪರ್ವೆಶ್ ವರ್ವ ನೀಡಿದ ಪ್ರಚೋದನಕಾರಿ ಹೇಳಿಕೆಗಳು ಮತ್ತು ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮಹಾತ್ಮಾ ಗಾಂಧಿ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟವನ್ನೇ ಅವಮಾನಿಸಿದ ಪ್ರಸಂಗಗಳು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲದ ಸನ್ನಿವೇಶಕ್ಕೆ ಕಾರಣವಾದವು. ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ರಾಜ್ಯಸಭೆ ಕಲಾಪ ಮುಂದೂಡಲಾಯಿತು.

    ದ್ವೇಷ ಭಾಷಣ ಮಾಡಿದ್ದಕ್ಕೆ ಚುನಾವಣೆ ಆಯೋಗದಿಂದ ಪ್ರಚಾರ ನಿಷೇಧಕ್ಕೆ ಒಳಗಾದ ಪರ್ವೆಶ್ ವರ್ವಗೆ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲೆ ಮಾತನಾಡಲು ಅವಕಾಶ ನೀಡಿದ್ದು ಗದ್ದಲಕ್ಕೆ ಕಾರಣವಾಯಿತು. ಇದಕ್ಕೂ ಮುನ್ನ ಹಣಕಾಸು ರಾಜ್ಯ ಸಚಿವ ಅನುರಾಗ್

    ಠಾಕೂರ್ ದೇಶದ ಆರ್ಥಿಕತೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ, ವಿಪಕ್ಷ ಸದಸ್ಯರು ‘ಗುಂಡು ಹೊಡೆಯುವುದನ್ನು ನಿಲ್ಲಿಸಿ’ ಎಂದು ಏರು ದನಿಯಲ್ಲಿ ಕೂಗಿ ಪ್ರತಿಭಟಿಸಿದರು. ಸುಮಾರು 30 ಸಂಸದರು ಸ್ಪೀಕರ್ ಪೀಠದ ಮುಂದೆ ಜಮಾಯಿಸಿ ‘ನಾಚಿಕೆಗೇಡು’ ಎಂದು ಘೋಷಣೆ ಕೂಗಿದರು.

    ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಪ್ರಯತ್ನಿಸಿದಾಗ ಗದ್ದಲ ಉಂಟಾಯಿತು. ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಿದರು. ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ನಿರ್ಣಯದ ಸಂದರ್ಭ ಚರ್ಚೆಗೆ ಅವಕಾಶವಿದೆ ಎಂದು ನಾಯ್ಡು ಹೇಳಿದರು.

    ಜಿಎಸ್​ಟಿ ಬಾಕಿ ಪಾವತಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಬಾಬ್ತು ರಾಜ್ಯಗಳಿಗೆ ಬಾಕಿಯಿರುವ ಹಣವನ್ನು ಎರಡು ಕಂತುಗಳಲ್ಲಿ ಪಾವತಿ ಮಾಡಲಾಗುವುದೆಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದರು. ತೆಲಂಗಾಣ ಮತ್ತು ಒಡಿಶಾದ ಸಂಸದರ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts