More

    ಎಕ್ಸಾಂ ವಾರಿಯರ್ಸ್​ಗೆ ಪಾಠ ಮಾಡಲಿದ್ದಾರೆ ಪ್ರಧಾನಿ ಮೋದಿ!

    ನವದೆಹಲಿ: ಕಳೆದೆರಡು ವರ್ಷಗಳಲ್ಲಿ ಕರೊನಾ ವಾರಿಯರ್ಸ್​ ಎಂಬುದನ್ನು ಬಹಳಷ್ಟು ಕೇಳಿದ್ದೇವೆ. ಅದೇ ರೀತಿ ಇದೀಗ ಎಕ್ಸಾಂ ವಾರಿಯರ್ಸ್​ ಸಮಯ. ವಿಶೇಷವೆಂದರೆ ಈ ಎಕ್ಸಾಂ ವಾರಿಯರ್ಸ್​ಗೆ ಪ್ರಧಾನಿ ನರೇಂದ್ರ ಮೋದಿಯವರೇ ಪಾಠ ಮಾಡಲಿದ್ದಾರೆ.

    ಹೌದು.. ಇದು ಪರೀಕ್ಷೆಯ ಸಮಯ ಆಗಿರುವುದರಿಂದ ಪರೀಕ್ಷಾರ್ಥಿಗಳಷ್ಟೇ ಅಲ್ಲದೆ ಅವರ ಪಾಲಕರು ಮತ್ತು ಶಿಕ್ಷಕರು ಕೂಡ ಪರೀಕ್ಷೆ ಕುರಿತ ಒತ್ತಡದಲ್ಲಿರುವುದು ಸಹಜ. ಅಂಥವರಿಗೆಂದೇ ಕೇಂದ್ರ ಸರ್ಕಾರ ಪರೀಕ್ಷಾ ಪೆ ಚರ್ಚಾ 2022 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

    ಏ. 1ರಂದು ದೆಹಲಿಯ ಟಲ್ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11ರಿಂದ ಈ ಪರೀಕ್ಷಾ ಪೆ ಚರ್ಚಾ ನಡೆಯಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದು, ಪರೀಕ್ಷಾ ಒತ್ತಡವನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಿಳಿಸಿಕೊಡಲಿದ್ದಾರೆ. ಜತೆಗೆ ಅವರ ಪ್ರಶ್ನೆಗಳಿಗೆ ಉತ್ತರಿಸಿ ಉತ್ತಮ ಎಕ್ಸಾಂ ವಾರಿಯರ್​ ಆಗಿ ಹೊರಹೊಮ್ಮುವುದು ಹೇಗೆ ಎಂಬ ಕುರಿತು ಕೂಡ ಸಲಹೆ ನೀಡಲಿದ್ದಾರೆ. ಇದು ಸಂವಾದ ಅಂದು ದೂರದರ್ಶನದಲ್ಲಿ ನೇರಪ್ರಸಾರ ಕೂಡ ಆಗಲಿದೆ.

    ಎಕ್ಸಾಂ ವಾರಿಯರ್ಸ್​ಗೆ ಪಾಠ ಮಾಡಲಿದ್ದಾರೆ ಪ್ರಧಾನಿ ಮೋದಿ!

    ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts