ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ANNAMALAI
Published on

ಚೆನ್ನೈ: ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ನೋಟಿಸ್ ನೀಡಲಾಗಿದೆ. ಡಿಎಂಕೆ ಎಂಪಿ ಆರ್​.ಎಸ್​. ಭಾರತಿ ಈ ಸಂಬಂಧ ಅಣ್ಣಾಮಲೈಗೆ ಲೀಗಲ್ ನೋಟಿಸ್ ಜಾರಿ ಮಾಡಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ತಪ್ಪು ಹೇಳಿಕೆ ನೀಡಿದ್ದನ್ನು ವಿರೋಧಿಸಿ ಈ ಮಾನನಷ್ಟ ಮೊಕದ್ದಮೆ ಹೂಡಿ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಅಣ್ಣಾಮಲೈ ಸ್ಟಾಲಿನ್​ ಅವರ ಬಳಿ ಸಾರ್ವಜನಿಕವಾಗಿ ಬೇಷರತ್​ ಕ್ಷಮೆ ಕೋರಬೇಕು, ಇನ್ಮುಂದೆ ತಪ್ಪು ಆರೋಪ ಮಾಡುವುದಿಲ್ಲ ಎಂದು ಒಪ್ಪಿಕೊಳ್ಳಬೇಕು ಇಲ್ಲವೇ ಮಾನನಷ್ಟ ಮೊತ್ತವಾಗಿ ನೂರು ಕೋಟಿ ರೂಪಾಯಿ ತೆರಬೇಕು ಎಂದು ನೋಟಿಸ್​ ಜಾರಿ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ನನ್ನದು ತಮಿಳುನಾಡಿಗಾಗಿ ಹೋರಾಟ ಎಂದು ಹೇಳಿದ್ದಲ್ಲದೆ, ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಅವರ ಎಲ್ಲ ಬೆದರಿಕೆಗಳಿಗೂ ನ್ಯಾಯಾಲಯದಲ್ಲೇ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net