More

    ವಿದ್ಯಾರ್ಥಿಗಳ ಪಾಲಕರ ಸಭೆ – ಪ್ರೊಬೇಷನರಿ ಪಿಎಸ್ಐ ಅರವಿಂದ ಅಂಗಡಿ ಸಲಹೆ

    ಕೆರೂರ: ಕೆಲವರು ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿ ಹರಡಿಸುತ್ತಿದ್ದು, ಅದಕ್ಕೆ ವಿದ್ಯಾರ್ಥಿಗಳು, ಪಾಲಕರು ಕಿವಿ ಕೊಡಬಾರದು ಎಂದು ಪ್ರೊಬೇಷನರಿ ಪಿಎಸ್‌ಐ ಅರವಿಂದ ಅಂಗಡಿ ಮನವಿ ಮಾಡಿದರು.

     ಪಟ್ಟಣದ ಕೆಜಿಎಸ್, ಎಂಪಿಎಸ್, ಹಳಪೇಟಿ ಸರ್ಕಾರಿ ಶಾಲೆಗೆ ಗುರುವಾರ ಭೇಟಿ ನೀಡಿದ ವೇಳೆ ಪಾಲಕರನ್ನು ಭೇಟಿಯಾದ ನಂತರ ಅವರು ಮಾತನಾಡಿದರು.ಮಕ್ಕಳ ಕಳ್ಳರು ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಯಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ  ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು ಮತ್ತು ಪಾಲಕರಿಗೆ ಧೈರ್ಯ ತುಂಬಲಾಗುತ್ತಿದೆ. ಯಾವುದೇ ಸಮಸ್ಯೆ ಬಂದರೆ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ಕೂಡಲೇ ಪೊಲೀಸರು ತಮ್ಮ ಬಳಿ ಬರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸುದ್ದಿಗಳನ್ನು ನಂಬಬಾರದು ಎಂದು ಹೇಳಿದರು.

    ಪೊಲೀಸ್ ಪೇದೆ ರಮೇಶ ದೊಡಮನಿ, ಮುಖ್ಯಶಿಕ್ಷಕಿ ಎನ್.ಡಿ.ಟಂಕಸಾಲಿ, ಎನ್.ಎಲ್.ರಾಠೋಡ, ಬಿ.ಬಿ.ಹಂಡಿ, ಎಂ.ಎಸ್.ನರಬೆಂಚಿ, ಎಚ್.ಆರ್.ದಳವಾಯಿ, ಎ.ಜಿ.ಮಳಗೌಡರ, ರೂಪಾ ಮಾದರ ಹಾಗೂ ಪಾಲಕರಾದ ವಿನಾಯಕ ಬಡಿಗೇರ, ಶಾಮಸಾಬ ಚೋರಗಸ್ತಿ, ಯಲ್ಲಪ್ಪ ಮತ್ತಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts