More

    ಸಂಬಳ ಕಡಿತ ಮಾಡಿದ್ದಾರೆ, ಶಾಲಾ ಶುಲ್ಕ ಪಾವತಿಗೆ ವಿನಾಯ್ತಿ ನೀಡಿ ಶಿಕ್ಷಣ ಸಂಸ್ಥೆಗಳಿಗೆ ಪಾಲಕರ ಆಗ್ರಹ

    ಬೆಂಗಳೂರು: ಕರೊನಾದಿಂದಾಗಿ ದೇಶವೇ ಲಾಕ್​ಡೌನ್​ನಲ್ಲಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಹಂತದಲ್ಲಿ ಸಂಬಳ ಕಡಿತ ಘೋಷಿಸಿವೆ. ಇನ್ನು ಖಾಸಗಿ ವಲಯದಲ್ಲಿ ಪರಿಸ್ಥಿತಿ ಇನ್ನೂ ಕರುಣಾಜನಕವಾಗಿದೆ. ಸಣ್ಣಪುಟ್ಟ ಉದ್ಯಮಗಳು ಮುಚ್ಚಿದ್ದು, ಕಾರ್ಮಿಕರಿಗೆ ಸಂಬಳ ನೀಡಲಾಗದ ಸ್ಥಿತಿಯಲ್ಲಿವೆ. ದೊಡ್ಡ ಕಂಪನಿಗಳು ಸಿಬ್ಬಂದಿಗೆ ವೇತನರಹಿತ ರಜೆ ಘೋಷಿಸಿವೆ. ಕೆಲವೆಡೆ ಸಂಬಳದಲ್ಲಿ ಭಾರಿ ಕಡಿತ ಮಾಡಲಾಗಿದೆ.

    ಇದಕ್ಕೆ ಸಂವಾದಿ ಎನ್ನುವಂತೆ ಜನರಿಂದಲೂ ಬೇಡಿಕೆಯೊಂದು ಕೇಳಿ ಬಂದಿದೆ. ಹೌದು ಮಧ್ಯಮ ವರ್ಗದ ಜನರು ಮಕ್ಕಳ ಶಿಕ್ಷಣಕ್ಕಾಗಿಯೇ ವಾರ್ಷಿಕ ಬಹುದೊಡ್ಡ ಮೊತ್ತವನ್ನು ವ್ಯಯಿಸುತ್ತಾರೆ. ಕರೊನಾ ಸಂಕಷ್ಟದಿಂದ ಕಳೆದೆರಡು ತಿಂಗಳಿಂದ ಶಾಲೆ-ಕಾಲೇಜುಗಳು ಸರಿಯಾಗಿ ನಡೆದಿಲ್ಲ. ಈ ಕಾರಣಕ್ಕಾಗಿ ಮಕ್ಕಳ ಶಾಲಾ ಶುಲ್ಕದಲ್ಲಿ ಶಿಕ್ಷಣ ಸಂಸ್ಥೆಗಳು ವಿನಾಯ್ತಿ ನೀಡಬೇಕೆಂಬ ಆಗ್ರಹ ಪಾಲಕರದ್ದಾಗಿದೆ.

    ಪ್ರಸ್ತುತ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಿರುವುದು ಮಾತ್ರವಲ್ಲದೆ, ಸರ್ಕಾರದ ಮುಂದಿನ ಆದೇಶದವರೆಗೆ ಯಾವುದೇ ರೀತಿಯ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಸ್ಪಷ್ಟವಾಗಿ ತಿಳಿಸಿದೆ.

    ಆದರೆ, ಈಗಾಗಲೇ ಕೆಲ ಶಾಲೆಗಳು ಮಕ್ಕಳ ಪ್ರವೇಶಕ್ಕಾಗಿ ಶುಲ್ಕ ಪಾವತಿಸುವಂತೆ ಪಾಲಕರಿಗೆ ಸೂಚಿಸುತ್ತಿವೆ. ಇದನ್ನು ಖಂಡಿಸಿ ಕೆಲ ಪಾಲಕರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

    ಸಂಬಳವನ್ನೇ ನಂಬಿಕೊಂಡಿದ್ದ ಬಹುತೇಕ ಪಾಲಕರಿಗೆ ಈ ತಿಂಗಳ ವೇತನ ಕಡಿತ ಶಾಕ್​ ನೀಡಿದೆ. ಹೀಗಾಗಿ ಮಕ್ಕಳ ಶಾಲಾ ಶುಲ್ಕದಲ್ಲಿ ವಿನಾಯ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.

    ಸಿಎ ಆಕಾಂಕ್ಷಿಗಳಿಗೆ ಪ್ರಾಯೋಗಿಕ ತರಬೇತಿಯಿಂದ ಒಂದು ತಿಂಗಳು ವಿನಾಯ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts