More

    ಆಂಧ್ರ-ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ

    ಪರಶುರಾಮಪುರ: ಆಂಧ್ರ-ಕರ್ನಾಟಕ ಗಡಿ ಗ್ರಾಮಗಳಲ್ಲಿ ಹೊರ ರಾಜ್ಯ- ಜಿಲ್ಲೆಯಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಟಿಎಚ್‌ಒ ಡಾ.ಪ್ರೇಮಸುಧಾ ತಿಳಿಸಿದರು.

    ಗುರುವಾರ ಜಾಜೂರು ಗ್ರಾಮಕ್ಕೆ ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಆಂಧ್ರದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ತಿಪ್ಪನಹಳ್ಳಿ, ಮುಚ್ಚರ‌್ಲಹಳ್ಳಿ, ಬುಡ್ಡಯ್ಯನಹಟ್ಟಿ, ಕರ್ನಾಟಕದ ಜಾಜೂರು, ಕಾಮಸಮುದ್ರ, ದೊಣೆಹಳ್ಳಿ, ಓಬಳಾಪುರ ಗ್ರಾಮಸ್ಥರು ದಿನಿಸ ಖರೀದಿಗೆ, ಆಸ್ಪತ್ರೆಗೆ ನಿತ್ಯ ಓಡಾಡುತ್ತಿದ್ದರು.

    ಅನಂತಪುರ ಜಿಲ್ಲೆಯನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿದ್ದರಿಂದ ಅಲ್ಲಿನವರು ರಾಜ್ಯಕ್ಕೆ, ಇಲ್ಲಿನವರು ಅಲ್ಲಿಗೆ ತೆರಳದಂತೆ ಗಡಿ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

    ಜಾಜೂರು ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ ಮಾತನಾಡಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ಸಲಹೆ ನೀಡಿದರು.

    ಟಿಎಚ್‌ಒಗೆ ಗ್ರಾಮಸ್ಥರ ಮನವಿ: ಜಾಜೂರು ಪಿಎಚ್‌ಸಿ ಮೇಲ್ದರ್ಜೆಗೇರಿಸಬೇಕು. 24/7 ಸೇವೆ ಒದಗಿಸಬೇಕು. ನಕಲಿ ವೈದ್ಯರ ಕ್ಲಿನಿಕ್ ಮುಚ್ಚಿಸಬೇಕು. ಆಂಧ್ರದಿಂದ ಇಲ್ಲಿನ ಆಸ್ಪತ್ರೆಗೆ ಬರುವವರನ್ನು ನಿಯಂತ್ರಿಸಬೇಕು ಎಂದು ಟಿಎಚ್‌ಒ ಅವರಿಗೆ ಗ್ರಾಮದ ಮುಖಂಡರಾದ ಕೆ.ಜೆ. ಸಂತೋಷ, ಓಬಳೇಶ, ಸತೀಶ, ಸುನಿಲ್, ಮಂಜು, ಕೃಷ್ಣಮೂರ್ತಿ, ಶ್ರೀನಿವಾಸ, ಲಾಲೂ ಪ್ರಸಾದ್ ಮನವಿ ಮಾಡಿದರು. ದಾದಿಯರಾದ ಪುಟ್ಟನರಸಮ್ಮ, ಕೀರ್ತಿ, ಆಶಾಕಾರ್ಯಕರ್ತೆ ರೇಣುಕಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts