More

    ಪರಶುರಾಮಪುರದಲ್ಲಿ ವಿಶೇಷ ವಾರ್ಡ್

    ಪರಶುರಾಮಪುರ: ಕರೊನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

    ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಿತಿಗತಿ ಪರಿಶೀಲಿಸಿ ಮಾತನಾಡಿದರು.

    ಆಂಧ್ರ ಗಡಿಭಾಗದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಈಗಾಗಲೇ ಹೊಸ ಅತ್ಯಾಧುನಿಕ ಎಕ್ಸರೇ ಯಂತ್ರ ನೀಡಿದೆ. ಇನ್ನುಳಿದಂತೆ ಆಸ್ಪತ್ರೆಗೆ ಮೂಲಸೌಕರ್ಯ ಪೂರೈಸಿ ರೋಗಿಗಳ ಸಂಖ್ಯೆಗೆ ತಕ್ಕಂತೆ ವೈದ್ಯರನ್ನು ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸರ್ಕಾರದ ಆದೇಶದಂತೆ ಹೋಬಳಿ ಕೇಂದ್ರದಲ್ಲಿ ಜ್ವರ ಲಸಿಕಾ ಕೇಂದ್ರವನ್ನು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆರಂಭಿಸಿದೆ. ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಐಸೋಲೇಷನ್ ವಾರ್ಡ್ ಆರಂಭಿಸಿ, ಅಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ತಾಪಂ ಅಧ್ಯಕ್ಷೆ ವಿಜಯಲಕ್ಷಿ ್ಮ, ಟಿಎಚ್‌ಒ ಡಾ.ಪ್ರೇಮಸುಧಾ, ಆಡಳಿತ ವೈದ್ಯಾಧಿಕಾರಿ ಡಾ.ರಮೇಶ, ಮುಖಂಡರಾದ ಜಯವೀರಾಚಾರಿ, ನಾಗಭೂಷಣ, ಎಸ್.ಚನ್ನಕೇಶವ, ಗುಜ್ಜಾರಪ್ಪ, ಸ್ಟಾಫ್‌ನರ್ಸ್ ಮಂಜುಳಾ, ಆರೋಗ್ಯ ಕಾರ್ಯಕರ್ತರಾದ ಸಚಿನ್, ವೀರೇಂದ್ರ, ಮಂಜುನಾಥ ಇತರರಿದ್ದರು.

    ಟಿಎಚ್‌ಒ ಡಾ.ಪ್ರೇಮಸುಧಾ ಹೇಳಿಕೆ: ಹೋಬಳಿಯ ಐದು ಕಡೆ ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ನೆರೆಯ ರಾಜ್ಯಗಳಿಂದ ಜನ-ವಾಹನ ರಾಜ್ಯದೊಳಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಒಳ-ಹೊರ ಸಂಚರಿಸುವವರ ಮೇಲೆ ಆರೋಗ್ಯ, ಪೊಲೀಸ್ ಇಲಾಖೆ ಹದ್ದಿನ ಕಣ್ಗಾವಲು ಇರಿಸಿದೆ. ಹೋಬಳಿಯ 52-60 ಹಳ್ಳಿಗಳಲ್ಲಿ ಆರೋಗ್ಯ ಇಲಾಖೆ ಜ್ವರ, ಕೆಮ್ಮು, ನೆಗಡಿ, ಬೇದಿ ಲಕ್ಷಣ ಹೊಂದಿದವರನ್ನು ತಪಾಸಣೆ ನಡೆಸಲು ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts