More

  ಜನಪದ ಕಲೆಗಳ ಸಂರಕ್ಷಣೆ ಅಗತ್ಯ

  ಪರಶುರಾಮಪುರ: ಜಾನಪದ ಕಲೆ-ಸಾಹಿತ್ಯದ ಪ್ರಕಾರಗಳು ಸಮೂಹ ಮಾಧ್ಯಮಗಳ ಅಬ್ಬರಕ್ಕೆ ಬಲಿಯಾಗುತ್ತಿರುವ ಈ ಹೊತ್ತಿನಲ್ಲಿ ಬೆಳಗೆರೆ ಸಂಸ್ಥೆ ಕೋಲಾಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಸಾಹಿತಿ ಕಣಜನಹಳ್ಳಿ ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

  ರಾಜನಹಳ್ಳಿ ಶಾಂತಮ್ಮ ಸ್ಮಾರಕ ವತಿಯಿಂದ ಸಮೀಪದ ಬೆಳಗೆರೆ ಬಿ.ಸೀತಾರಾಮಶಾಸ್ತ್ರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕೋಲಾಟ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

  ಜಾನಪದ ಕಲೆಗಳಲ್ಲಿ ಕೋಲಾಟ ಪ್ರಮುಖ ನೃತ್ಯ ಪ್ರಕಾರ. ಹಾಡುಗಳ ಜತೆ ಕೋಲನ್ನು ಲಯಬದ್ಧವಾಗಿ ಹಾಕುವುದು ಒಂದು ವಿಶೇಷ ಅನುಭವ ಎಂದರು.

  ಕೋಲಾಟಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಾಲಕಾಲಕ್ಕೆ ಅದು ಬದಲಾದರೂ ಜನಪ್ರಿಯತೆಗೆ ಮಾತ್ರ ಯಾವುದೇ ಧಕ್ಕೆಯಾಗಿಲ್ಲ. ಹಳ್ಳಿ-ಪಟ್ಟಣಗಳಲ್ಲಿ ಕೋಲಾಟ ಕಲೆ ಇನ್ನು ಜೀವಂತವಾಗಿದೆ ಎಂದು ತಿಳಿಸಿದರು.

  ಶಾರದಾ ಮಂದಿರ ವಿದ್ಯಾಸಂಸ್ಥೆ ಸಂಪರ್ಕಾಧಿಕಾರಿ ಕೆ.ರಾಜಣ್ಣ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೀಸುವಾಗ, ಕಣದಲ್ಲಿ ನಾಟಿ ಸೇರಿ ವಿವಿಧ ಕೆಲಸ ಮಾಡುವಾಗ ಜನಪದರು ಹಾಡು ಹಾಡುತ್ತಿದ್ದರು ಎಂದರು.

  ಚಿಂತಕ ರಮೇಶ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಉಪಕಾರ್ಯದರ್ಶಿ ಕರ್ಣ ಬೆಳಗೆರೆ, ಉಪನ್ಯಾಸಕ ಡಿ.ಮೂಡಲಗಿರಿಯಪ್ಪ ಮಾತನಾಡಿದರು.

  ಪ್ರಾಂಶುಪಾಲೆ ಆರ್.ಸರೋಜಮ್ಮ, ಉಪನ್ಯಾಸಕರಾದ ಚೆನ್ನಕೇಶವ, ಪುಷ್ಪಾವತಿ, ದಾಕ್ಷಾಯಿಣಿ, ಅಬ್ದುಲ್ ವಾಯಿದ್, ಮುಖ್ಯಶಿಕ್ಷಕ ವಿ.ಎಚ್.ವೀರಣ್ಣ, ನಿವೃತ್ತ ಶಿಕ್ಷಕ ಕೆ.ಮಂಜಪ್ಪ, ಮಂಜುನಾಥ್, ಶಿಕ್ಷಕರಾದ ಸುಹಾಸ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts