More

    ಜ್ವರದ ಲಸಿಕಾ ಚಿಕಿತ್ಸಾ ಕೇಂದ್ರ ಆರಂಭ

    ಪರಶುರಾಮಪುರ: ಕರೊನಾ ವೈರಸ್ ನಿಯಂತ್ರಣಕ್ಕೆ ಜಾಗೃತಿ ಕೇಂದ್ರ ಹಾಗೂ ಜ್ವರದ ಲಸಿಕಾ ಕೇಂದ್ರವನ್ನು ಪರಶುರಾಮಪುರದ ಕೆಪಿಎಸ್ ಶಾಲೆಯಲ್ಲಿ ಆರಂಭಿಸಲಾಗಿದೆ ಎಂದು ಚಳ್ಳಕೆರೆ ಟಿಎಚ್‌ಒ ಡಾ.ಪ್ರೇಮಸುಧಾ ತಿಳಿಸಿದರು.

    ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಜ್ವರದ ಲಸಿಕಾ ಕೇಂದ್ರ ಹಾಗೂ ಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

    ಹೋಬಳಿಯ 52-60 ಹಳ್ಳಿಗಳಿದ್ದು, ಯಾರಿಗಾದರೂ ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಕಂಡುಬಂದರೆ ಕೂಡಲೆ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರೊಂದಿಗೆ ಚಿಕಿತ್ಸಾ ಘಟಕಕ್ಕೆ ಕರೆತರಬೇಕು ಎಂದರು.

    ಆಡಳಿತ ವೈದ್ಯಾಧಿಕಾರಿ ಡಾ.ರಮೇಶ ಮಾತನಾಡಿ, ಜ್ವರದ ಚಿಕಿತ್ಸಾ ಕೇಂದ್ರದಲ್ಲಿ ದಿನದ 24 ತಾಸೂ ವೈದ್ಯಕೀಯ ಸಿಬ್ಬಂದಿ ಹಾಜರಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ತಾಪಂ ಅಧ್ಯಕ್ಷೆ ವಿಜಯಲಕ್ಷಿ ್ಮ, ಡಾ.ಸಂದೀಪ್, ಆಸ್ಪತ್ರೆಯ ಸ್ಟಾಫ್‌ನರ್ಸ್ ಮಂಜುಳಾ, ಲ್ಯಾಬ್ ಟೆಕ್ನಿಷಿಯನ್ ವೀರೇಂದ್ರ, ಅನ್ನಪೂರ್ಣಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts