More

    ಬೆಳೆ ನಷ್ಟ ಪರಿಹಾರಕ್ಕೆ ಪರಶುರಾಮಪುರ ರೈತರ ಮನವಿ

    ಪರಶುರಾಮಪುರ: ಅಧಿಕ ಮಳೆ ಹಾಗೂ ರೋಗಬಾಧೆಯಿಂದ ಹೋಬಳಿಯಲ್ಲಿ ಸಾವಿರಾರು ಎಕರೆ ಶೇಂಗಾ ಬೆಳೆ ನಷ್ಟವಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಕಳೆದ ಹತ್ತಾರು ವರ್ಷಗಳಿಂದ ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ಶೇಂಗಾ ಬಿತ್ತಿ ಸಂಕಷ್ಟ ಅನುಭವಿಸುತ್ತಿದ್ದ ಹೋಬಳಿಯ ರೈತರಿಗೆ ಈ ಬಾರಿ ಅಧಿಕ ಮಳೆ ಕೂಡ ಸಮಸ್ಯೆ ತಂದೊಡ್ಡಿದೆ. ಜಾನುವಾರುಗಳಿಗೂ ಮೇವು ಸಿಗದ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಹೋಬಳಿಯ 85 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಸುರಿದ ಉತ್ತಮ ಮಳೆಯಿಂದ ಸಸಿಗಳನ್ನು ಸಮೃದ್ಧವಾಗಿ ಬೆಳೆದಿದ್ದವು. ಆದರೆ ನಂತರ ಸುರಿದ ಮಳೆಯಿಂದ ನಷ್ಟ ಅನುಭವಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
    ಹೋಬಳಿಯಲ್ಲಿ ಬೆಳೆದಿದ್ದ ಶೇ.50 ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ. ಸರ್ಕಾರ ಕೂಡಲೇ ನೆರವಿಗೆ ಬರಬೇಕು ಎಂದು ರೈತರಾದ ಪುರ‌್ಲೆಹಳ್ಳಿ ರಾಘವೇಂದ್ರ, ಹೊನ್ನೇಶಪ್ಪ ಇತರರು ಆಗ್ರಹಿಸಿದ್ದಾರೆ.

    ಪರಶುರಾಮಪುರ ಹೋಬಳಿಯಲ್ಲಿ ರೋಗದಿಂದ ಶೇಂಗಾ ಬೆಳೆ ಇಳುವರಿ ಕುಂಠಿತವಾದರೆ, ನಂತರ ಮಳೆ ಬಂದು ಫಸಲು ರೈತರ ಕೈಗೆ ಸಿಗದಂತಾಗಿದೆ.

    | ಹೇಮಂತಕುಮಾರ ಕೃಷಿ ಅಧಿಕಾರಿ, ಪರಶುರಾಮಪುರ ರೈತ ಸಂಪರ್ಕ ಕೇಂದ್ರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts