More

    ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಿ

    ಕಮಲನಗರ: ವಚನ ಜಾತ್ರೆ-೨೦೨೪, ಡಾ.ಚನ್ನಬಸವ ಪಟ್ಟದ್ದೇವರ ೨೫ನೇ ಸ್ಮರಣೋತ್ಸವ, ಅಕ್ಕಮಹಾದೇವಿ ಜಯಂತ್ಯುತ್ಸವ ಅಂಗವಾಗಿ ಏ.೧೯ ರಿಂದ ೨೩ರವರೆಗೆ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಭಾಲ್ಕಿಯಲ್ಲಿ ಹಮ್ಮಿಕೊಳ್ಳಲಾಗಿದ್ದು , ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಕರೆ ನೀಡಿದರು.

    ಪಟ್ಟಣದ ಹಿರೇಮಠ ಶಾಖಾಮಠದಲ್ಲಿ ಶನಿವಾರ ಸಂಜೆ ಡಾ.ಚನ್ನಬಸವ ಪಟ್ಟದ್ದೇವರ ೨೫ನೇ ಸ್ಮರಣೋತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವ ತತ್ವ ಪ್ರಚಾರ, ಪ್ರಸಾರ ಜತೆಗೆ ಗಡಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆ, ಅನುಭವ ಮಂಟಪ ಪುನರುತ್ಥಾನ, ಗಡಿ ಜಿಲ್ಲೆ ಬೀದರ ಕನ್ನಡ ನೆಲದಲ್ಲಿ ಉಳಿಸಿರುವುದು ಸೇರಿ ಅನೇಕ ವಿಧಾಯಕ ಕಾರ್ಯಗಳ ಮೂಲಕ ಡಾ.ಚನ್ನಬಸವ ಪಟ್ಟದ್ದೇವರು ನಮ್ಮೆಲ್ಲರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

    ಶರಣ ಚನ್ನಬಸವ ಬಿರಾದಾರ, ಪ್ರಭುರಾವ ಬಿರಾದಾರ, ಸುರೇಶ ಸೊಲ್ಲಾಪುರೆ, ಯಶವಂತ ಬಿರಾದಾರ, ರವಿ ಕಾರಬಾರಿ, ಪ್ರಭುರಾವ ಕಳಸೆ, ರಮೇಶ ಬಿರಾದಾರ, ಅವಿನಾಶ ಶಿವಣಕರ, ಶಾಮರಾವ ಬಿರಾದಾರ, ಹಾವಗಿರಾವ ಟೊಣ್ಣೆ, ಅಜಿತ್ ರಾಗಾ, ಸೂರ್ಯಕಾಂತ ಮಹಾಜನ, ರಾಮೇಶ್ವರ ಶಿವಣಕರ, ರಾಜಕುಮಾರ ಆರ್. ಬಿರಾದಾರ ಇತರರಿದ್ದರು.

    ಡಾ.ಚನ್ನಬಸವ ಪಟ್ಟದ್ದೇವರ ಚಿಂತನೆಗಳು ಯುವ ಪೀಳಿಗೆಗೆ ಪರಿಚಯಿಸುವುದು ಅವಶ್ಯಕವಾಗಿದೆ. ಪಟ್ಟದ್ದೇವರ ಸ್ಮರಣೋತ್ಸವ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪಟ್ಟದ್ದೇವರ ಹುಟ್ಟೂರಾದ ಕಮಲನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು.
    | ಶ್ರೀ ಗುರುಬಸವ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts