More

    ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್​ ಷರೀಫ್​ರನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಣೆ ಮಾಡಿದ ಸರ್ಕಾರ…

    ದುಬೈ: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್​ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಹಾಗೇ ಅವರ ಜಾಮೀನು ಅವಧಿಯ ವಿಸ್ತರಣೆ ಮಾಡದೆ ಇರಲು ನಿರ್ಧರಿಸಿದೆ.

    ಷರೀಫ್​ ಕಳೆದ ವರ್ಷ ನವೆಂಬರ್​ನಲ್ಲಿ ಚಿಕಿತ್ಸೆಗಾಗಿ ಲಂಡನ್​ಗೆ ಹಾರಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅವರಿಗೆ ಚಿಕಿತ್ಸೆಗಾಗಿ ಲಾಹೋರ್​ಗೆ ತೆರಳಲು ಲಾಹೋರ್​ ಹೈಕೋರ್ಟ್​ ನಾಲ್ಕು ವಾರಗಳ ಅವಕಾಶ ನೀಡಿತ್ತು. ಆದರೆ ಅವರಿಗೆ ಸರ್ಜರಿ ಅಗತ್ಯವಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದರು.

    ಷರೀಫ್​ಗೆ ಜಾಮೀನು ನೀಡಲು ವಿಧಿಸಲಾಗಿದ್ದ ಷರತ್ತಿನ ಅನ್ವಯ ಅವರು ತಮ್ಮ ವೈದ್ಯಕೀಯ ವರದಿಯನ್ನು ಇಸ್ಲಾಮಾಬಾದ್​ ಹೈಕೋರ್ಟ್​ನಿಂದ ರಚಿಸಲಾದ ಮಂಡಳಿಗೆ ಸಲ್ಲಿಸಬೇಕಿತ್ತು. ಆದರೆ ಷರೀಫ್​ ನಿಯಮಗಳನ್ನು ಪಾಲಿಸಲಿಲ್ಲ. ಹೀಗಾಗಿ ತಲೆಮರೆಸಿಕೊಂಡ ಆರೋಪಿ ಎಂದು ಸರ್ಕಾರವೇ ಘೋಷಿಸಿದೆ. ಇನ್ನೇನಿದ್ದರೂ ನ್ಯಾಯಾಲಯ ಔಪಚಾರಿಕ ತೀರ್ಪು ನೀಡುವುದಷ್ಟೇ ಬಾಕಿ ಇದೆ.

    ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅಧ್ಯಕ್ಷತೆಯಲ್ಲಿ ನಡೆದ ಫೆಡರಲ್​ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಚಿಕಿತ್ಸೆಯ ಅಗತ್ಯವಿದೆ ಎಂದು ಮೆಡಿಕಲ್​ ಸರ್ಟಿಫಿಕೇಟ್​ ನೀಡಿದ್ದರಿಂದ ಷರೀಫ್​ಗೆ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ ಷರೀಫ್​ ತಮ್ಮ ವೈದ್ಯಕೀಯ ವರದಿಯನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹಾಗಾಗಿ ಮೆಡಿಕಲ್​ ಸರ್ಟಿಫಿಕೇಟ್​ನ್ನೂ ಕೂಡ ತಿರಸ್ಕರಿಸಲಾಗಿದೆ. ಸರ್ಕಾರ ಅವರನ್ನು ತಲೆ ಮರೆಸಿಕೊಂಡ ಆರೋಪಿ ಎಂದು ಘೋಷಣೆ ಮಾಡಿದ ಎಂದು ಪಾಕ್​ ಪ್ರಧಾನಿಯ ವಿಶೇಷ ಸಹಾಯಕ ಡಾ. ಫಿರ್ದೌಸ್ ಆಶಿಕ್ ಆವನ್​ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts