More

    ರಾಮಮಂದಿರ ಶಿಲಾನ್ಯಾಸ ಹಿಂದುಗಳಿಗೆ ಐತಿಹಾಸಿಕ ದಿನ ಎಂದ ಪಾಕ್ ಮಾಜಿ ಕ್ರಿಕೆಟಿಗ ಕನೇರಿಯಾ

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ನೆರವೇರಿದ ದಿನ ಹಿಂದುಗಳ ಪಾಲಿಗೆ ಐತಿಹಾಸಿಕ ದಿನ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ರಾಮ ದೇವರು ನಮಗೆ ಆದರ್ಶ ಪುರುಷ ಎಂದೂ ಪಾಕಿಸ್ತಾನ ಪರ ಆಡಿದ ಕೇವಲ 2ನೇ ಹಿಂದು ಕ್ರಿಕೆಟಿಗ ಎನಿಸಿರುವ ಕನೇರಿಯಾ ಹೇಳಿದ್ದಾರೆ.

    ‘ರಾಮನ ಸೊಬಗು ಇರುವುದು ಅವನ ಹೆಸರಿನಲ್ಲಲ್ಲ, ಅವನ ವ್ಯಕ್ತಿತ್ವದಲ್ಲಿ. ರಾಕ್ಷಸರ ವಿರುದ್ಧದ ಗೆಲುವಿನ ಪ್ರತೀಕ ಅವನು. ಇಂದು ವಿಶ್ವದೆಲ್ಲೆಡೆ ಸಂಭ್ರಮ ಮನೆಮಾಡಿದೆ. ಇದು ಶ್ರೇಷ್ಠ ಸಂತೃಪ್ತಿಯ ಕ್ಷಣವಾಗಿದೆ. ಜೈ ಶ್ರೀರಾಮ್’ ಎಂದು ಕನೇರಿಯಾ ಬುಧವಾರದ ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಜತೆಗೆ ಶ್ರೀರಾಮನ ಚಿತ್ರವನ್ನೂ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸಕ್ಕೆ ಕ್ರೀಡಾತಾರೆಯರ ಸಂಭ್ರಮ

    ಕನೇರಿಯಾಗಿಂತ ಮುನ್ನ ಅವರ ಸೋದರ ಸಂಬಂಧಿ ಅನಿಲ್ ದಲ್ಪಟ್ ಪಾಕಿಸ್ತಾನ ಪರ ಆಡಿದ ಮೊದಲ ಹಿಂದು ಕ್ರಿಕೆಟಿಗ ಎನಿಸಿದ್ದರು. ಕನೇರಿಯಾ 2000ದಿಂದ 2010ರ ನಡುವೆ ಪಾಕಿಸ್ತಾನ ಪರ 61 ಟೆಸ್ಟ್ ಆಡಿದ್ದು, 261 ವಿಕೆಟ್ ಕಬಳಿಸಿದ್ದಾರೆ. ಸದ್ಯ ಅವರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಎದುರಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇತರೆಲ್ಲ ಕಳಂಕಿತ ಕ್ರಿಕೆಟಿಗರಿಗೆ ಮಂಡಳಿಯಿಂದ ಕ್ಷಮಾದಾನ ದೊರೆತಿದ್ದರೂ, ಅಲ್ಪಸಂಖ್ಯಾತ ಸಮುದಾಯದ ಕನೇರಿಯಾ ಬಗ್ಗೆ ಕಠಿಣ ನೀತಿ ಮುಂದುವರಿಸಲಾಗಿದೆ.

    ರಾಮಮಂದಿರ ಶಿಲಾನ್ಯಾಸಕ್ಕೆ ಖುಷಿಪಟ್ಟ ಕ್ರಿಕೆಟಿಗ ಕೈಫ್​, ಧರ್ಮದ್ವೇಷಿಗಳ ವಿರುದ್ಧ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts