More

    ಭಾರತದ ವಿರುದ್ಧ ಇಸ್ಲಾಮಿಕ್​ ರಾಷ್ಟ್ರಗಳನ್ನು ಎತ್ತಿಕಟ್ಟುವ ಪಾಕ್​ ಯತ್ನ ವಿಫಲ

    ನವದೆಹಲಿ: ಸದಾ ಒಂದಿಲ್ಲೊಂದು ಸಂಚು ರೂಪಿಸುತ್ತಲೇ ಇರುವ ಪಾಕಿಸ್ತಾನ ಈ ಬಾರಿ ಇಸ್ಲಾಮಿಕ್​ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಯತ್ನಿಸಿ ಭಾರಿ ಮುಖಭಂಗ ಅನುಭವಿಸಿದೆ. ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಭಾರತಕ್ಕೆ ಅಂಟಿಸುವ ಪಾಕ್​ನ ಈ ಪ್ರಯತ್ನಕ್ಕೆ ಮಾಲ್ಡೀವ್ಸ್​ ಮತ್ತು ಯುಎಇಗಳು ತಣ್ಣೀರೆರೆಚಿದ್ದಾಗಿ ತಿಳಿದುಬಂದಿದೆ.

    ಇಸ್ಲಾಮಿಕ್​ ಸಹಕಾರದ ಸಂಘಟನೆಯ (ಒಐಸಿ) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಭಾರತ ವಿರೋಧಿ ಗುಂಪು ರಚಿಸಿಕೊಂಡು, ಭಾರತ ಮುಸ್ಲಿಂ ವಿರೋಧಿ ಎಂಬ ಭಾವನೆ ಬಿತ್ತುವುದು ಹಾಗೂ ಆ ಎಲ್ಲ ರಾಷ್ಟ್ರಗಳನ್ನು ಭಾರತದ ವಿರುದ್ಧ ಛೂ ಬಿಡುವುದು ಪಾಕಿಸ್ತಾನದ ಹುನ್ನಾರವಾಗಿತ್ತು ಎನ್ನಲಾಗಿದೆ.

    ಆದರೆ ವಾಸ್ತವಿಕ ತಳಹದಿಯಲ್ಲಿ ಭಾರತಕ್ಕೆ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಅಂಟಿಸುವುದು ಸರಿಯಲ್ಲ. ಇದರಿಂದ ದಕ್ಷಿಣ ಏಷ್ಯಾದಲ್ಲಿ ಸೌಹಾರ್ದ ವಾತಾವರಣಕ್ಕೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ಹೇಳಿದ ಮಾಲ್ಡೀವ್​ ಮುಖಂಡರು ಪಾಕ್​ನ ಹುನ್ನಾರವನ್ನು ವಿಫಲಗೊಳಿಸಿದರು ಎನ್ನಲಾಗಿದೆ. ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಯುಎಇ ಕೂಡ ಇದಕ್ಕೆ ಕೈಜೋಡಿಸಿತು ಎಂದು ಹೇಳಲಾಗಿದೆ.

    ಅತೃಪ್ತರ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಡಿಟೇಲ್ಸ್ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts