More

    ಬಹುತೇಕ ಉಗ್ರ ಸಂಘಟನೆಗಳಿಗೆ ಪಾಕ್‍ ನಂಟು: ವಿಶ್ವಸಂಸ್ಥೆ ವರದಿ

    ನವದೆಹಲಿ: ಪಾಕಿಸ್ಥಾನದ ಪ್ರಜೆಗಳೇ ಬಹುತೇಕ ಉಗ್ರ ಸಂಘಟನೆಗಳ ನಾಯಕತ್ವ ಹೊಂದಿದ್ದಾರೆ. ಅವರನ್ನು ಇನ್ನೂ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಅಲ್‍ ಕೈದಾ ಇನ್ ದ ಇಂಡಿಯಾ ಸಬ್‍ಕಾಂಟಿನೆಂಟ್‍ (ಎಕ್ಯೂಐಎಸ್‍), ಇಸ್ಲಾಮಿಕ್ ಸ್ಟೇಟ್‍ ಇನ್ ಇರಾಕ್ ಆ್ಯಂಡ್ ದ ಲೆವಂಟ್‍- ಖೊರಸಾನ್‍(ಐಎಸ್‍ಐಎಲ್‍-ಕೆ), ತೆಹ್ರಿಕ್‍ ಏ ತಾಲಿಬಾನ್ ಪಾಕಿಸ್ತಾನ್‍(ಟಿಟಿಪಿ) ಮತ್ತೂ ಇನ್ನೂ ಅನೇಕ ಉಗ್ರ ಸಂಘಟನೆಗಳ ನಾಯಕತ್ವ ಪಾಕಿಸ್ಥಾನಿ ಪ್ರಜೆಗಳ ವಶದಲ್ಲೇ ಇವೆ. ಈ ಉಗ್ರ ಸಂಘಟನೆಗಳು ಇನ್ನೂ ನಿಷೇಧಕ್ಕೆ ಒಳಗಾಗಿಲ್ಲ ಎಂಬ ಅಂಶದತ್ತ ವರದಿ ಬೊಟ್ಟುಮಾಡಿದೆ.

    ಅನಲಿಟಿಕಲ್ ಸಪೋರ್ಟ್ ಮತ್ತು ಸ್ಯಾಂಕ್ಷನ್ಸ್ ಟೀಮ್‍ನ 26ನೇ ವರದಿಯಲ್ಲಿ ಈ ಅಂಶಗಳು ಉಲ್ಲೇಖವಾಗಿವೆ. ಇದು ಐಎಸ್‍ಐಎಲ್ , ಅಲ್‍ಕೈದಾ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಘಟನೆಗಳ ನಿಗಾ ವಹಿಸುತ್ತಿದ್ದು, ಮಾಹಿತಿ ಕಲೆಹಾಕಿ ವರದಿ ಸಿದ್ಧಪಡಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಆಫ್ಘನ್ ಸ್ಪೆಷಲ್ ಫೋರ್ಸ್ ಅಲ್ಲಿ ದೇಶಾದ್ಯಂತ ಕಾರ್ಯಾಚರಣೆ ನಡೆಸಿ ಐಎಸ್‍ಐಎಲ್‍-ಕೆ ಮುಖ್ಯಸ್ಥ ಅಸ್ಲಾಮ್ ಫಾರೂಕಿ(ಅಬ್ದುಲ್ಲಾಹ್ ಊರ್ಕಝೈ) ಮತ್ತು ಆತನ ಉತ್ತರಾಧಿಕಾರಿ ಜಿಯಾ ಉಲ್ ಹಕ್‍(ಅಬು ಉಮರ್ ಖೊರಸಾನಿ) ಮತ್ತು ಇತರರನ್ನು ಬಂಧಿಸಿತ್ತು.

    ಇದನ್ನೂ ಓದಿ: ಕೋವಿಡ್‍ ರಿಪೋರ್ಟಿಂಗ್ ಕರ್ನಾಟಕ ಬೆಸ್ಟ್ – ಸ್ಟ್ಯಾನ್ ಫೋರ್ಡ್ ಅಧ್ಯಯನ ವರದಿ

    ಈ ಫಾರೂಕಿ ಪಾಕಿಸ್ಥಾನದ ಕೈಬರ್ ಪಖ್ತುನ್‍ಖ್ವಾ ಪ್ರಾಂತ್ಯದವನು. ಕಾಬೂಲ್‍ನಲ್ಲಿ ಮಾರ್ಚ್ ‍ತಿಂಗಳಲ್ಲಿ ನಡೆದ ಗುರುದ್ವಾರದ ಮೇಲಿನ ದಾಳಿ ಸಂಚುಕೋರ. ಈ ದಾಳಿಯಲ್ಲಿ 25 ಸಿಖ್ಖರು ಮೃತಪಟ್ಟಿದ್ದರು.ಈತನ ಹೆಸರು ಇನ್ನೂ ಕಪ್ಪು ಪಟ್ಟಿಗೆ ಸೇರ್ಪಡೆಯಾಗಿಲ್ಲ. ಇದೇ ರೀತಿ ಹಕ್ ಹೆಸರು ಕೂಡ ಸೇರಿಲ್ಲ.

    ಇದನ್ನೂ ಓದಿ: ಕೋವಿಡ್‍-19ಗೆ ಪ್ರಾಣತೆತ್ತ ಸರ್ಕಾರಿ ನೌಕರರ ಕುಟುಂಬಕ್ಕೆ ವಿಶೇಷ ಕುಟುಂಬ ಪಿಂಚಣಿ- ಬಿಹಾರ ಕ್ಯಾಬಿನೆಟ್ ಒಪ್ಪಿಗೆ

    ಅಲ್‍ ಕೈದಾ ಇನ್‍ ಇಂಡಿಯನ್ ಸಬ್‍ಕಾಂಟಿನೆಂಟ್‍ (ಎಕ್ಯೂಐಎಸ್‍) ಅಫ್ಘಾನಿಸ್ತಾನದ ನಿಮರ್ಝ್, ಹೆಲ್ಮಂಡ್, ಕಂದಹಾರ್ ಪ್ರಾಂತ್ಯಗಳ ತಾಲೀಬಾನ್‍ ಛಾಯೆಯಲ್ಲಿದ್ದು, ಅದರ ಹಾಲಿ ನಾಯಕ ಪಾಕಿಸ್ತಾನಿ ಒಸಾಮಾ ಮಹಮೂದ್‍ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸಿಮ್ ಉಮರ್‍ ಎಂಬಾತನ ಉತ್ತರಾಧಿಕಾರಿ ಈ ಮಹಮೂದ್. ಈತನ ಹೆಸರು ಕೂಡ ಕಪ್ಪುಪಟ್ಟಿಗೆ ಸೇರ್ಪಡೆಯಾಗಿಲ್ಲ. ಇದೆ ರೀತಿ, ಹಲವು ಉಗ್ರ ಸಂಘಟನೆಗಳ ಸ್ಥಿತಿಯೂ ಇದೆ ಎಂದು ವರದಿಬೊಟ್ಟುಮಾಡಿದೆ.

    ಇದನ್ನೂ ಓದಿ: ಸೂಪರ್ ಸ್ಪ್ರೆಡರ್ ಆಗಲು ಇಸ್ಲಾಮಿಕ್ ಸ್ಟೇಟ್ಸ್ ಕರೆ –  ಮೌಲಾನಾ ಸಾದ್‍,  ಜಮಾತನ್ನು ಹಾಡಿ ಹೊಗಳಿದ ಐಎಸ್!

    ಇನ್ನು, ಟಿಟಿಪಿಯ ನಾಯಕ ಅಮಿರ್ ನೂರ್ ವಾಲಿ ಮೆಹ್‍ಸೂದ್ ಕಳೆದ ತಿಂಗಳಷ್ಟೇ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಂದ ಗ್ಲೋಬಲ್ ಟೆರರಿಸ್ಟ್ ಎಂದು ಘೋಷಿತನಾಗಿದ್ದಾನೆ. ಈತನ ಟಿಟಿಪಿ ಆಫ್ಘಾನಿಸ್ತಾನದಲ್ಲಿ ಪ್ರಭಾವಿಯಾಗಿದ್ದು, ನಾನಾ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಕುಖ್ಯಾತಿ ಗಳಿಸಿದೆ. ಮೆಹಸೂದ್ ಜತೆಗೆ ಆತನ ಡೆಪ್ಯೂಟಿ ಖಾರಿ ಅಮ್ಜದ್ ಮತ್ತು ವಕ್ತಾರ ಮೊಹಮ್ಮದ್ ಖೊರಸಾನಿ ಕೂಡ ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರ್ಪಡೆಯಾಗಬೇಕಷ್ಟೆ. ಇವರೆಲ್ಲರೂ ಪಾಕಿಗಳು. ಹಾಗೆ ಬಹುತೇಕ ಎಲ್ಲ ಉಗ್ರ ಸಂಘಟನೆಗಳಿಗೆ ಪಾಕಿಸ್ಥಾನದ ನಂಟಿದೆ. (ಏಜೆನ್ಸೀಸ್)

    ಅಲಿಬಾಬಾ, ಜಾಕ್‍ಮಾಗೆ ಸಮನ್ಸ್ ಜಾರಿಗೊಳಿಸಿದ ಜಿಲ್ಲಾ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts