More

    ಕೋವಿಡ್‍-19ಗೆ ಪ್ರಾಣತೆತ್ತ ಸರ್ಕಾರಿ ನೌಕರರ ಕುಟುಂಬಕ್ಕೆ ವಿಶೇಷ ಕುಟುಂಬ ಪಿಂಚಣಿ- ಬಿಹಾರ ಕ್ಯಾಬಿನೆಟ್ ಒಪ್ಪಿಗೆ

    ಪಟನಾ: ಬಿಹಾರದಲ್ಲಿ ಕೋವಿಡ್‍ -19ನಿಂದಾಗಿ ಸರ್ಕಾರಿ ನೌಕರರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಅವರನ್ನು ಆಶ್ರಯಿಸಿದ್ದ ಕುಟುಂಬದವರಿಗೆ ವಿಶೇಷ ಕುಟುಂಬ ಪಿಂಚಣಿ ಕೊಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದನ್ನು ಪರಿಹಾರದ ನೆಲೆಯಲ್ಲಿ ಒದಗಿಸಲಾಗುತ್ತಿದ್ದು, ಅವರಿಗೆ ಉದ್ಯೋಗ ಕಂಡುಕೊಳ್ಳಲು ಮತ್ತು ಇತರೆ ನೆರವಿನ ಜತೆಗೆ ಇದೂ ಸೇರ್ಪಡೆಯಾಗಲಿದೆ ಎಂದು ಕ್ಯಾಬಿನೆಟ್ ಸಚಿವಾಲಯ ಇಲಾಖೆಯ ವಿಶೇಷ ಸೆಕ್ರೆಟರಿ ಮಿಥಿಲೇಶ್ ಕುಮಾರ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಒಂದೊಮ್ಮೆ ಮೃತರ ಕುಟುಂಬದವರು ಪರಿಹಾರದ ನೆಲೆಯಲ್ಲಿ ಈ ಸೌಲಭ್ಯ ನಿರಾಕರಿಸಿದರೆ ಅಂತಹ ಕುಟುಂಬದವರಿಗೆ ಆ ವ್ಯಕ್ತಿಯ ಪೂರ್ಣ ವೇತನವನ್ನು ಅಂದರೆ ಅವರ ಸೇವಾವಧಿಯ ಪೂರ್ಣಗೊಳ್ಳುವ ತಾರೀಕಿನವರೆಗಿನ ವೇತನವನ್ನು ಪಾವತಿಸಲಾಗುತ್ತದೆ. ಇದನ್ನು ವಿಶೇಷ ಕುಟುಂಬ ಪಿಂಚಣಿಯ ಲೆಕ್ಕದಲ್ಲೇ ಸೇರಿಸಿಕೊಳ‍್ಳಲಾಗುತ್ತಿದೆ.

    ಇದನ್ನೂ ಓದಿ:  ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆ ಕಾಂಗ್ರೆಸ್‍ಗೆ: ಮಣಿಪುರದ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್!  

    ಸಚಿವ ಸಂಪುಟದ ಈ ತೀರ್ಮಾನವು ಈ ವರ್ಷದ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದ್ದು, 2021ರ ಮಾರ್ಚ್ 31ರ ತನಕ ಚಾಲ್ತಿಯಲ್ಲಿ ಇರಲಿದೆ. ಸರ್ಕಾರಿ ನೌಕರರು ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಸರ್ಕಾರದ ಈ ತೀರ್ಮಾನ ಮಹತ್ವ ಪಡೆದುಕೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 11 ಶಾಸನಗಳ ವಿಚಾರವೂ ಸೇರಿ 29 ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಕ್ಕಿದೆ.ಬಿಹಾರದಲ್ಲಿ ನಾಲ್ಕು ದಿನಗಳ ಮುಂಗಾರು ಅಧಿವೇಶನ ಆಗಸ್ಟ್ 3ರಿಂದ ನಡೆಯಲಿದೆ. (ಏಜೆನ್ಸೀಸ್)

    ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ರಾಜ್ಯ ಸರ್ಕಾರದ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts