More

    17 ವರ್ಷಗಳ ಬಳಿಕ ಕೊಲೆ ಪ್ರಕರಣದಿಂದ ಬಾಲಿವುಡ್​ ನಟ ಆಮೀರ್​ ಖಾನ್​ಗೆ ಕೊನೆಗೂ ಸಿಕ್ಕಿತು ಮುಕ್ತಿ?!

    ಕೊಲೆ ಕೇಸ್​ನಿಂದ ಕೊನೆಗೂ ಆಮೀರ್​ ಖಾನ್​ಗೆ ಮುಕ್ತಿ ಸಿಕ್ಕಿದೆ. ಕಳೆದ 17 ವರ್ಷಗಳಿಂದ ಪಾಕ್​ ಜೈಲಿನಲ್ಲಿ ಬಂಧಿಯಾಗಿದ್ದ ಆಮೀರ್​ ಖಾನ್,​ ದೋಷಮುಕ್ತನಾಗಿ ಆಚೆ ಬಂದಿದ್ದಾನೆ. ಅರೇ ಏನಿದು ಆಮೀರ್​ ಖಾನ್​ ಕೊಲೆ ಕೇಸ್​ನಲ್ಲಿ ಸಿಲುಕಿದ್ರಾ? ಅಚ್ಚರಿ ಅನಿಸಿದರೂ ಹೀಗೊಂದು ಸುದ್ದಿ ಪಕ್ಕದ ಪಾಕಿಸ್ತಾನದಲ್ಲಿ ಹರಿದಾಡುತ್ತಿದ್ದೆ. ಹಾಗಂತ ಬಾಲಿವುಡ್​ ನಟ ಆಮೀರ್​ ಖಾನ್​ಗೂ ಈ ಆಮೀರ್​ ಖಾನ್​ಗೂ ಯಾವುದೇ ಸಂಬಂಧವಿಲ್ಲ. ಆದರೆ, ಆ ಆಮೀರ್​ ಖಾನ್​ಗೆ ಬಾಲಿವುಡ್​ ನಟ ಆಮೀರ್​ ಫೋಟೋ ಬಳಕೆ ಮಾಡಿ ಪಾಕ್​ ಮೀಡಿಯಾ ಎಡವಟ್ಟು ಮಾಡಿಕೊಂಡಿದೆ.
    ಹೌದು, ಪಾಕಿಸ್ತಾನದ ಸುದ್ದಿವಾಹಿನಿಯೊಂದು ಹೀಗೊಂದು ಎಡವಟ್ಟು ಮಾಡಿದ್ದು, ಬಳಿಕ ಕ್ಷಮಾಪಣೆ ಕೇಳಿದೆ. ಆದರೆ, ಹಾಗೆ ಬಿತ್ತರವಾದ ಫೋಟೋಗಳ ಸ್ಕ್ರೀನ್​ಶಾಟ್​ ಎಲ್ಲೆಡೆ ವೈರಲ್​ ಆಗಿದ್ದು, ಆಮೀರ್​ ಯಾವಾಗ ಕೊಲೆ ಆರೋಪಿಯಾದ? 17ವರ್ಷ ಪಾಕ್​ನಲ್ಲಿದ್ರಾ ಎಂದು ಅಲ್ಲಿನ ಜನಗಳೇ ಟ್ರೋಲ್​ ಮಾಡುತ್ತಿದ್ದಾರೆ.
    ಪಾಕ್​ ಪತ್ರಕರ್ತೆ ನೈಲಾ ಇನಾಯತ್​ ಫೋಟೋ ಶೇರ್​ ಮಾಡಿಕೊಂಡು, ಶೀರ್ಷಿಕೆ: 17 ವರ್ಷಗಳ ನಂತರ ಎಂಕ್ಯೂಎಂ ನಾಯಕ ಅಮೀರ್ ಖಾನ್ ಕೊಲೆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ. ಭಾರತೀಯ ನಟ ಆಮೀರ್ ಖಾನ್ ಕಳೆದ 17 ವರ್ಷಗಳಿಂದ ಪಾಕಿಸ್ತಾನದಲ್ಲಿದ್ದರು ಎಂದು ತಿಳಿದಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts