More

    ‘ಭಾರತಕ್ಕೆ ಬಂದು ಪಾಕಿಸ್ತಾನವನ್ನು ಹೊಗಳಿದ ಡೊನಾಲ್ಡ್ ಟ್ರಂಪ್​’ ಪಾಕ್​ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ ಹೆಡ್​ಲೈನ್​ಗಳು…!

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಫೆ.24 ರಂದು ಭಾರತಕ್ಕೆ ಆಗಮಿಸಿದ್ದಾರೆ. ನಿನ್ನೆ ಗುಜರಾತ್​ನ ಅಹಮದಾಬಾದ್​ನಲ್ಲಿ ಮಾತನಾಡುತ್ತ, ಭಾರತವನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು.

    ಅಮೆರಿಕ ಭಾರತವನ್ನು ಪ್ರೀತಿಸುತ್ತದೆ, ಗೌರವಿಸುತ್ತದೆ. ಅಮೆರಿಕ ಭಾರತಕ್ಕೆ ಯಾವತ್ತೂ ನಿಷ್ಠ ಸ್ನೇಹಿತನಾಗಿರುತ್ತದೆ ಎಂದಿದ್ದರು. ಇಸ್ಲಾಮಿಕ್​ ಉಗ್ರವಾದದ ಬಗ್ಗೆಯೂ ಮಾತನಾಡಿದ್ದರು. ಚೀನಾವನ್ನೂ ಉಲ್ಲೇಖಿಸಿದ್ದರು. ಪಾಕಿಸ್ತಾನದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಪಾಕಿಸ್ತಾನದ ಪ್ರಗತಿಯ ಚಿಹ್ನೆಗಳನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದ್ದರು.

    ಈಗ ಪಾಕಿಸ್ತಾನ ಮಾಧ್ಯಮಗಳು ಮಾತ್ರ ಡೊನಾಲ್ಡ್​ ಟ್ರಂಪ್​ ಅವರ ಈ ಮಾತುಗಳನ್ನು ಎತ್ತಿ ತೋರಿಸುತ್ತಿವೆ. ಪಾಕಿಸ್ತಾನದೊಂದಿಗೆ ಯುಎಸ್ ಸಂಬಂಧ ಉತ್ತಮವಾಗಿದೆ ಎಂಬ ಮಾತುಗಳನ್ನೇ ಪ್ರಮುಖವಾಗಿ ಇಟ್ಟುಕೊಂಡು, ಭಾರತದಲ್ಲಿ ಮೋದಿಯವರ ಎದುರು ಪಾಕಿಸ್ತಾನವನ್ನು ಡೊನಾಲ್ಡ್​ ಟ್ರಂಪ್​ ಹೊಗಳಿದ್ದಾರೆ ಎಂದು ವರದಿ ಮಾಡಿವೆ.
    ಡಾನ್​ ಎಂಬ ಪ್ರಮುಖ ಇಂಗ್ಲಿಷ್​ ಪತ್ರಿಕೆ ತನ್ನ ಮೊದಲ ಪುಟದಲ್ಲಿಯೇ ಸುದ್ದಿ ಪ್ರಕಟಿಸಿದೆ. ಟ್ರಂಪ್ ಪ್ರೇಸಸ್​ ಪಾಕಿಸ್ತಾನ ಇನ್​ ಇಂಡಿಯಾ (ಭಾರತದಲ್ಲಿ ಪಾಕಿಸ್ತಾನವನ್ನು ಹೊಗಳಿದ ಟ್ರಂಪ್​) ಎಂಬ ಲೇಖನವನ್ನು ಬರೆದುಕೊಂಡಿದೆ.

    ಸೋಮವಾರ ಭಾರತಕ್ಕೆ ಆಗಮಿಸಿರುವ ಟ್ರಂಪ್​ಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಟ್ರಂಪ್​ ಕೂಡ ಭಾರತದ ಜಾತ್ಯತೀತ ಪರಂಪರೆಯನ್ನು ಹೊಗಳಿದರು ಎಂದು ಡಾನ್​ ವರದಿ ಮಾಡಿದೆ. ಅದಾದ ಬಳಿಕ ಟ್ರಂಪ್​ ಅವರು ಪಾಕಿಸ್ತಾನವನ್ನು ಹೊಗಳಿದ್ದಾರೆ ಎಂದು ಬರೆದುಕೊಂಡಿದೆ.

    ಡಾನ್​ ಪತ್ರಿಕೆ ಮಾತ್ರವಲ್ಲದೆ, ಪಾಕಿಸ್ತಾನ ಬಹುತೇಕ ಇಂಗ್ಲಿಷ್​ ವೆಬ್​ಸೈಟ್​ಗಳು, ಮಾಧ್ಯಮಗಳು, ಕೆಲವು ಚಾನೆಲ್​ಗಳು ಕೂಡ ಟ್ರಂಪ್​ ಪಾಕಿಸ್ತಾನವನ್ನು ಭಾರತದಲ್ಲಿ ನಿಂತು ಹೊಗಳಿದ್ದಾರೆ ಎಂದೇ ವರದಿ ಮಾಡಿವೆ.
    ನಿಜಕ್ಕೂ ಟ್ರಂಪ್​ ಮಾತನಾಡಿದ್ದೇನು?

    ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಗೆ ನಮ್ಮ ದೇಶದ ಗಡಿಗಳು ಸದಾ ಮುಚ್ಚಿರುತ್ತವೆ. ಯಾರಾದರೂ ನಮ್ಮ ಭದ್ರತಾ ವ್ಯವಸ್ಥೆ, ರಕ್ಷಣಾ ಸಿಬ್ಬಂದಿಗೆ ಹಾನಿ ಮಾಡಲು ಬಂದರೆ ಅವರು ಅತಿದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್​ ಹೇಳಿದರು.

    ನಾನು ಪಾಕಿಸ್ತಾನದೊಂದಿಗೆ ಸಕಾರಾತ್ಮಕವಾಗಿ ವ್ಯವಹಾರ ಮಾಡುತ್ತಿದ್ದೇನೆ. ಪಾಕ್​ನೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದರು.

    ಪಾಕಿಸ್ತಾನ ಮಾಧ್ಯಮಗಳು ಟ್ರಂಪ್​ ಅವರ ಉಳಿದ ಮಾತುಗಳನ್ನು ಹೈಲೈಟ್ ಮಾಡದೆ, ಕೇವಲ ನಮ್ಮ ಸಂಬಂಧ ಉತ್ತಮವಾಗಿದ ಎಂಬುದಷ್ಟನ್ನೇ ಉಲ್ಲೇಖಿಸಿವೆ. (ಏಜೆನ್ಸೀಸ್)

    'ಭಾರತಕ್ಕೆ ಬಂದು ಪಾಕಿಸ್ತಾನವನ್ನು ಹೊಗಳಿದ ಡೊನಾಲ್ಡ್ ಟ್ರಂಪ್​' ಪಾಕ್​ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ ಹೆಡ್​ಲೈನ್​ಗಳು...!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts