More

    ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್‌ಗೆ ಕರೊನಾ..!

    ಕರಾಚಿ: ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಸನಾ ಮೀರ್‌ಗೆ ಕರೊನಾ ವೈರಸ್ ಕಾಣಿಸಿಕೊಂಡಿದೆ. ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದಕ್ಕೆ ವೀಕ್ಷಕ ವಿವರಣೆ ನೀಡುವಾಗವಾಗ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಸನಾ ಮೀರ್, ಕ್ವಾಯಿದ್ ಇ ಅಜಮ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದರು. ಸನಾ ಮೀರ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಐಸೋಲೇಷನ್‌ನಲ್ಲಿ ಇರಿಸಲಾಗಿದ್ದು, ವೀಕ್ಷಕ ವಿವರಣೆಗಾರ ತಂಡದಿಂದ ತೆಗೆದುಹಾಕಲಾಗಿದೆ.

    ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕರ್ನಾಟಕದ ಖ್ಯಾತ ಹೃದಯ ತಜ್ಞರಿಂದ ಚಿಕಿತ್ಸೆ

    ಸನಾ ಮೀರ್ ಜತೆ ವೀಕ್ಷಕ ವಿವರಣೆ ನೀಡುತ್ತಿದ್ದ ಇತರರನ್ನು ಐಸೋಲೇಷನ್‌ಗೆ ಕಳುಹಿಸಲಾಗಿದೆ. 34 ವರ್ಷದ ಮೀರ್ ಸನಾ, 2009 ರಿಂದ 2017 ರವರೆಗೆ ಪಾಕ್ ಪರ 226 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 137 ಪಂದ್ಯಗಳಿಗೆ ನಾಯಕಿಯಾಗಿದ್ದರು. ಸನಾ ನಾಯಕತ್ವದಲ್ಲಿ ಪಾಕ್ ತಂಡ 2010 ಹಾಗೂ 2014ರ ಏಷ್ಯಾಡ್‌ನಲ್ಲಿ ಸ್ವರ್ಣ ಗೆದ್ದಿತ್ತು. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಸನಾ, ದೇಶೀಯ ಹಾಗೂ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

    ವಿದ್ಯುತ್ ಉತ್ಪಾದಿಸುತ್ತಿರುವ ಕರ್ನಾಟಕದ ರೈತನಿಗೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts