More

    ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ನತ್ತ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಯಾಣ

    ಲಾಹೋರ್: ಪಾಕಿಸ್ತಾನದ 20 ಆಟಗಾರರು ಮತ್ತು 11 ತರಬೇತಿ ಸಿಬ್ಬಂದಿ ವರ್ಗವನ್ನು ಒಳಗೊಂಡ ತಂಡ ಐತಿಹಾಸಿಕ ಇಂಗ್ಲೆಂಡ್ ಪ್ರವಾಸಕ್ಕೆ ಭಾನುವಾರ ತೆರಳಿದೆ. ಕರೊನಾ ಹಾವಳಿಯ ನಡುವೆ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಪಾಕಿಸ್ತಾನ ತಂಡ ಆಡಲಿದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 3 ಟೆಸ್ಟ್ ಮತ್ತು 3 ಟಿ20 ಪಂದ್ಯಗಳ ಸರಣಿಯ ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಾಗಿದೆ.

    ಇದನ್ನೂ ಓದಿ: ಭಾರತದ ಮೊದಲ ಸಿಕ್ಸರ್ ಸಿಡಿಸಿದ್ದು ಯಾರು ಗೊತ್ತೇ?

    ಪ್ರವಾಸದ ಆರಂಭದಲ್ಲಿ ಮೊದಲ 14 ದಿನ ವೋರ್ಸೆಸ್ಟರ್‌ನಲ್ಲಿ ಪಾಕ್ ತಂಡ ಕ್ವಾರಂಟೈನ್‌ನಲ್ಲಿರಲಿದೆ. ಬಳಿಕ ಡರ್ಬಿಶೈರ್‌ನಲ್ಲಿ ಸರಣಿಗೆ ಸಿದ್ಧತೆ ನಡೆಸಲಿದೆ. ವಿಶೇಷ ವಿಮಾನದಲ್ಲಿ ಪಾಕ್ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದು, ಪ್ರತಿ 2 ಸೀಟ್‌ನಲ್ಲಿ ಒಬ್ಬರೇ ಆಟಗಾರ ಕುಳಿತು ಪ್ರಯಾಣಿಸಿದರು. ಪ್ರವಾಸಕ್ಕೆ 29 ಆಟಗಾರರ ತಂಡವನ್ನು ಪಿಸಿಬಿ ಪ್ರಕಟಿಸಿತ್ತು. ಆದರೆ ಈ ಪೈಕಿ 10 ಆಟಗಾರರು ಪಾಸಿಟಿವ್ ಬಂದಿದ್ದರೆ, ಶೋಯಿಬ್ ಮಲಿಕ್ ತಡವಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.

    ಇದನ್ನೂ ಓದಿ: ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

    ಈ ನಡುವೆ 10 ಪಾಸಿಟಿವ್ ಆಟಗಾರರ ಪೈಕಿ ಶನಿವಾರ 6 ಮಂದಿಗೆ ನೆಗೆಟಿವ್ ಬಂದಿದೆ. ಆದರೆ ಇನ್ನೊಮ್ಮೆ ಕರೊನಾ ಪರೀಕ್ಷೆ ನಡೆಯಲಿದ್ದು, 2ನೇ ಬಾರಿಯೂ ನೆಗೆಟಿವ್ ಬಂದರೆ ಇಂಗ್ಲೆಂಡ್‌ಗೆ ಪ್ರಯಾಣಿಸಲು ಹಸಿರು ನಿಶಾನೆ ಸಿಗಲಿದೆ. ಮೂಲ ತಂಡದ 18 ಆಟಗಾರರ ಜತೆಗೆ ಮೀಸಲು ಬಳಗದಲ್ಲಿದ್ದ ವಿಕೆಟ್ ಕೀಪರ್ ರೋಹೈಲ್ ನಜೀರ್ ಮತ್ತು ವೇಗಿ ಮುಸಾ ಖಾನ್ ಕೂಡ ತಂಡದ ಜತೆಗೆ ಪ್ರಯಾಣಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಶೇಷ ವಿಮಾನಕ್ಕಾಗಿ 4.7 ಕೋಟಿ ರೂ. ಮೊತ್ತ ವ್ಯಯಿಸಿದೆ. ಜತೆಗೆ ಪಾಕ್ ವಿರುದ್ಧದ ಸರಣಿಯ ಪ್ರಸಾರ ಹಕ್ಕಿನಿಂದ 707 ಕೋಟಿ ರೂ. ಆದಾಯದ ನಿರೀಕ್ಷೆಯನ್ನೂ ಹೊಂದಿದೆ.

    ಇದನ್ನೂ ಓದಿ: ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    ಇಂಗ್ಲೆಂಡ್‌ಗೆ ತೆರಳಿದ ತಂಡ: ಅಜರ್ ಅಲಿ (ನಾಯಕ), ಬಾಬರ್ ಅಜಮ್ (ಉಪನಾಯಕ), ಅಬಿದ್ ಅಲಿ, ಅಸದ್ ಶಫಿಕ್, ಹೀಮ್ ಅಶ್ರ್, ವಾದ್ ಅಲಮ್, ಇಫ್ತಿಕಾರ್ ಅಹ್ಮದ್, ಇಮಾದ್ ವಾಸಿಂ, ಇಮಾಮ್ ಉಲ್ ಹಕ್, ಖುಷ್‌ದಿಲ್ ಷಾ, ಮೊಹಮದ್ ಅಬ್ಬಾಸ್, ಮುಸಾ ಖಾನ್, ನಸೀಮ್ ಷಾ, ರೋಹೈಲ್ ನಜೀರ್, ರ್ಸ್ರಾಜ್ ಅಹ್ಮದ್, ಶಹೀನ್ ಷಾ ಅಫ್ರಿದಿ, ಶಾನ್ ಮಸೂದ್, ಸೋಹೈಲ್ ಖಾನ್, ಉಸ್ಮಾನ್ ಶಿನ್‌ವಾರಿ, ಯಾಸಿರ್ ಷಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts