More

    ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವು ಒಂದು: ಅಮೆರಿಕ ಅಧ್ಯಕ್ಷ ಜೋ ಬೈಡೆನ್​

    ವಾಷಿಂಗ್ಟನ್​: ಯಾವುದೇ ಒಗ್ಗಟ್ಟು ಇಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ, ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದಾರೆ.

    ಲಾಸ್​ ಏಂಜಲಿಸ್​ನಲ್ಲಿ ನಡೆದ ಡೆಮಾಕ್ರಟಿಕ್ ಕಾಂಗ್ರೆಸನಲ್ ಕ್ಯಾಂಪೆನ್ ಕಮಿಟಿ ಕಾರ್ಯಕ್ರಮದಲ್ಲಿ ಬೈಡೆನ್​ ಈ ಹೇಳಿಕೆ ನೀಡಿದ್ದಾರೆ. ಚೀನಾ ಮತ್ತು ರಷ್ಯಾ ಜೊತೆಗಿನ ಅಮೆರಿಕ ವಿದೇಶಾಂಗ ನೀತಿಯ ಬಗ್ಗೆ ಬೈಡೆನ್​ ಮಾತನಾಡುವಾಗ ಪಾಕಿಸ್ತಾನ ವಿಶ್ವದ ಅಪಾಯಕಾರಿ ದೇಶಗಳಲ್ಲಿ ಒಂದು ಎಂದು ಹೇಳಿದರು.

    ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಹೆಸರೇಳದೇ ಟೀಕಿಸಿದ ಬೈಡೆನ್​, ಈ ಒಬ್ಬ ವ್ಯಕ್ತಿ ತನಗೆ ಬೇಕಾದನ್ನು ಅರ್ಥ ಮಾಡಿಕೊಳ್ಳುತ್ತಾನೆ ಆದರೆ, ಅಗಾಧವಾದ ಸಮಸ್ಯೆಗಳನ್ನು ತನ್ನಲ್ಲೇ ಹೊಂದಿದ್ದಾನೆ. ಹೀಗಿರುವಾಗ ನಾವು ಅದನ್ನು ಹೇಗೆ ನಿಭಾಯಿಸುತ್ತೇವೆ? ರಷ್ಯಾದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ? ಎಂದು ಪ್ರಶ್ನಿಸಿದ ಬೈಡೆನ್​, ಬಹುಶಃ ನನಗನಿಸಿದ ಪ್ರಕಾರ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವೆಂದರೆ ಅದು ಪಾಕಿಸ್ತಾನ. ಏಕೆಂದರೆ, ಯಾರೊಂದಿಗೂ ಒಗ್ಗೂಡದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದೆ ಎಂದು ಡೆಮಾಕ್ರೆಟಿಕ್​ ಪಾರ್ಟಿ ಕಾರ್ಮಕ್ರಮದಲ್ಲಿ ಬೈಡೆನ್​ ಮಾತನಾಡಿದನ್ನು ವೈಟ್​ ಹೌಸ್​ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಬೈಡೆನ್​ ಅವರ ಈ ಮಾತು ಅಮೆರಿಕ ಜೊತೆ ಉತ್ತಮ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿರುವ ಶೆಹಬಾಜ್​ ಶರೀಫ್​ ನೇತೃತ್ವದ ಪಾಕಿಸ್ತಾನದ​ ಸರ್ಕಾರಕ್ಕೆ ಹಿನ್ನಡೆಯಾಗಲಿದೆ.

    21 ನೇ ಶತಮಾನದ ಎರಡನೇ ತ್ರೈಮಾಸಿಕದಲ್ಲಿ ಯುಎಸ್ ತನ್ನ ಕ್ರಿಯಾಶೀಲತೆಯನ್ನು ಬದಲಾಯಿಸಲು ಅಗಾಧ ಅವಕಾಶಗಳಿವೆ ಎಂದು ಬೈಡೆನ್ ಹೇಳಿದರು. ಪ್ರಸ್ತುತ ಸಾಕಷ್ಟು ವಿಚಾರಗಳು ನಡೆಯುತ್ತಿವೆ. ಆದರೂ ತನ್ನ ಕ್ರಿಯಾಶೀಲತೆಯನ್ನು ಬದಲಾಯಿಸಲು ಅಮೆರಿಕಕ್ಕೆ ಸಾಕಷ್ಟು ಅವಕಾಶ ಇದೆ ಎಂದರು. (ಏಜೆನ್ಸೀಸ್​)

    ರಷ್ಯಾ ಸೇನೆಯೊಂದಿಗೆ ನ್ಯಾಟೋ ಪಡೆಗಳ ನೇರ ಘರ್ಷಣೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ: ಪುಟಿನ್ ಎಚ್ಚರಿಕೆ​

    ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

    ಒಂದೇ ಮನೆಯಲ್ಲಿ 2 ಕಾಳಿಂಗ ಸರ್ಪ, ಅದರಲ್ಲೊಂದು ದೈತ್ಯ ಹಾವು! ಎದೆ ಝಲ್​ ಎನಿಸುವ ವಿಡಿಯೋ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts