More

    ಗೆಲುವಿನ ಹಳಿಗೆ ಮರಳಿದ ಪಾಕ್: ಬಾಬರ್ ಅಜಮ್ ಪಡೆ ಸೆಮೀಸ್ ಆಸೆ ಜೀವಂತ, ಟೂರ್ನಿಯಿಂದ ಹೊರಬಿದ್ದ ಬಾಂಗ್ಲಾದೇಶ

    ಕೋಲ್ಕತ: ಸರ್ವಾಂಗೀಣ ನಿರ್ವಹಣೆ ತೋರಿದ ಪಾಕಿಸ್ತಾನ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸೋಲಿನ ಸರಪಳಿ ಕಳಚಿದೆ. ಎಡಗೈ ವೇಗಿ ಶಹೀನ್ ಷಾ ಅಫ್ರಿದಿ (23ಕ್ಕೆ3), ಮೊಹಮದ್ ವಸಿಂ (31ಕ್ಕೆ 3) ಶಿಸ್ತಿನ ದಾಳಿ ಹಾಗೂ ಬ್ಯಾಟರ್ ಖರ್ ಜಮಾನ್ (81 ರನ್, 74 ಎಸೆತ, 3 ಬೌಂಡರಿ, 7 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ತನ್ನ 7ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಬಾಬರ್ ಅಜಮ್ ಪಡೆ ಗೆಲುವಿನ ಹಳಿಗೆ ಮರಳಿದ್ದು, ಸೆಮೀಸ್ ಆಸೆ ಜೀವಂತವಿರಿಸಿದೆ. ಇತ್ತ ಶಕೀಬ್ ಅಲ್ ಹಸನ್ ಬಳಗ 6ನೇ ಸೋಲು ಅನುಭವಿಸಿದೆ.
    ಈಡನ್ ಗಾರ್ಡನ್ಸ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾ, ಪಾಕ್ ವೇಗಿಗಳ ಬಿಗಿದಾಳಿಯ ನಡುವೆಯೂ, ಅನುಭವಿ ಮಹಮುದುಲ್ಲಾ (56 ರನ್, 70 ಎಸೆತ, 6 ಬೌಂಡರಿ, 1 ಸಿಕ್ಸರ್) ಆಸರೆಯಿಂದ 45.1 ಓವರ್‌ಗಳಲ್ಲಿ 204 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಅಬ್ದುಲ್ಲಾ ಶಫೀಕ್ (69 ರನ್, 69 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಖರ್ ಜಮಾನ್ ಒದಗಿಸಿದ ಉತ್ತಮ ಆರಂಭದ ಬಲದಿಂದ ಪಾಕಿಸ್ತಾನ, 32.3 ಓವರ್‌ಗಳಲ್ಲಿ 3 ವಿಕೆಟ್‌ಗೆ 205 ರನ್‌ಗಳಿಸಿ ಜಯದ ನಿಟ್ಟುಸಿರು ಬಿಟ್ಟಿದೆ.
    ಬಾಂಗ್ಲಾದೇಶ: 45.1 ಓವರ್‌ಗಳಲ್ಲಿ 204 (ಲಿಟನ್ ದಾಸ್ 45, ಶಾಂಟೋ 4, ಮುಶ್ಫಿಕರ್ 5, ಮಹಮುದುಲ್ಲಾ 56, ಶಕೀಬ್ 43, ಮೆಹಿದಿ 25, ಶಹೀನ್ ಷಾ ಅಫ್ರಿದಿ 23ಕ್ಕೆ 3, ವಸೀಂ 31ಕ್ಕೆ 3, ರ್ೌ 36ಕ್ಕೆ 2). ಪಾಕಿಸ್ತಾನ: 32.3 ಓವರ್‌ಗಳಲ್ಲಿ 3 ವಿಕೆಟ್‌ಗೆ 205 (ಶಫೀಕ್ 69, ಖರ್ 81, ಬಾಬರ್ 9, ರಿಜ್ವಾನ್ 26*, ಇಫ್ತಿಕಾರ್ 17*, ಮೆಹಿದಿ 60ಕ್ಕೆ3). ಪಂದ್ಯಶ್ರೇಷ್ಠ: ಖರ್ ಜಮಾನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts