More

    ಪಾಕಿಸ್ತಾನಕ್ಕೆ ಕೊರೊನಾ ವೈರಸ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ; ಇಬ್ಬರಿಗೆ ಸೋಂಕು ತಗುಲಿದ್ದು ದೃಢ

    ಇಸ್ಲಾಮಾಬಾದ್​: ಕೊರೊನಾ ವೈರಸ್​ ಚೀನಾದಿಂದ ಶುರುವಾಗಿ, ಭಾರತ, ಜಪಾನ್​, ಇರಾನ್​, ಇಟಲಿ ಸೇರಿ ಹಲವು ದೇಶಗಳಿಗೆ ಪಸರಿಸಿದೆ.

    ಈಗ ಪಾಕಿಸ್ತಾನಕ್ಕೂ ಕಾಲಿಟ್ಟಿದೆ. ಪಾಕ್​ ನಲ್ಲಿ ಇಬ್ಬರಿಗೆ ಕೊರೊನಾ ವೈರಸ್​ ತಗುಲಿರುವುದು ದೃಢಪಟ್ಟಿರುವುದಾಗಿ ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಪಾಕಿಸ್ತಾನ ಕೊರೊನಾ ವೈರಸ್ ತಗುಲಬಾರದು ಎಂದು ತುಂಬ ಪ್ರಯತ್ನ ಪಟ್ಟಿತ್ತು. ಎಷ್ಟೆಂದರೆ ವುಹಾನ್​ನಲ್ಲಿರುವ ಪಾಕ್​ ಪ್ರಜೆಗಳನ್ನು, ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿರಲಿಲ್ಲ. ಚೀನಾದಲ್ಲಿ ಕೊರೊನಾ ವೈರಸ್​ ತಗುಲಿದ ಕಾರಣಕ್ಕೆ ನಮ್ಮ ದೇಶದ ಪ್ರಜೆಗಳನ್ನು ಸ್ಥಳಾಂತರಿಸುವುದಿಲ್ಲ. ಅವರಲ್ಲಿ ಯಾರಿಗಾದರೂ ವೈರಸ್​ ತಗುಲಿಕೊಂಡಿದ್ದರೆ, ವಾಪಸ್​ ಕರೆದುಕೊಂಡು ಬಂದರೆ ನಮ್ಮ ದೇಶದಲ್ಲಿ ಉಳಿದವರಿಗೂ ತಗುಲುವ ಸಾಧ್ಯತೆ ಇರುತ್ತದೆ ಎಂದು ಹೇಳಿತ್ತು.
    ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಕೊರೊನಾ ತಡೆಯಲು ಪಾಕ್​ಗೆ ಸಾಧ್ಯವಾಗಲಿಲ್ಲ.

    ನಮ್ಮ ದೇಶದಲ್ಲಿ ಇಬ್ಬರಿಗೆ ಕೊರೊನಾ ತಗುಲಿದ್ದು ದೃಢಪಟ್ಟಿದೆ. ಅವರಿಬ್ಬರನ್ನೂ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಪ್ರಧಾನಮಂತ್ರಿಗಳ ವಿಶೇಷ ಸಹಾಯಕ ಡಾ. ಜಾಫರ್​ ಮಿರ್ಜಾ ಟ್ವೀಟ್​ ಮೂಲಕ ತಿಳಿಸಿದ್ದಾರೆ.

    ಯಾರೂ ಗಾಬರಿಪಡುವ ಅವಶ್ಯಕತೆ ಇಲ್ಲ. ಕೊರೊನಾ ವೈರಸ್​ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts