More

    ಕಿವೀಸ್ ಎದುರು ವೈಟ್‌ವಾಷ್‌ನಿಂದ ಪಾರಾದ ಪಾಕಿಸ್ತಾನ: ನ್ಯೂಜಿಲೆಂಡ್ ಎದುರು ಸಮಾಧಾನಕರ ಗೆಲುವು

    ಕ್ರೈಸ್ಟ್‌ಚರ್ಚ್: ಇಫ್ತಿಕಾರ್ ಅಹ್ಮದ್ (24ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ಪಾಕಿಸ್ತಾನ ತಂಡ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು 42 ರನ್‌ಗಳಿಂದ ಸಮಾಧಾನಕರ ಗೆಲುವು ದಾಖಲಿಸಿ ವೈಟ್‌ವಾಷ್‌ನಿಂದ ಪಾರಾಗಿದೆ. ಐದು ಪಂದ್ಯಗಳ ಸರಣಿಯನ್ನು ಕಿವೀಸ್ 4-1ರಿಂದ ವಶಪಡಿಸಿಕೊಂಡಿದೆ. ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್, 8 ವಿಕೆಟ್‌ಗೆ 134 ರನ್ ಪೇರಿಸಿತು. ಪ್ರತಿಯಾಗಿ ನಿರಂತರ ವಿಕೆಟ್ ಕಳೆದುಕೊಂಡ ಕಿವೀಸ್, ಅಂತಿಮವಾಗಿ 17.2 ಓವರ್‌ಗಳಲ್ಲಿ 92 ರನ್‌ಗಳಿಗೆ ಸರ್ವಪತನ ಕಂಡಿತು.

    ಪಾಕಿಸ್ತಾನ: 8 ವಿಕೆಟ್‌ಗೆ 134 (ರಿಜ್ವಾನ್ 38, ಬಾಬರ್ 13, ರ್ಹಾನ್ 19, ಅಬ್ಬಾಸ್ 15*, ಟಿಮ್ ಸೌಥಿ 19ಕ್ಕೆ 2, ಇಶ್ ಸೋಧಿ 22ಕ್ಕೆ2). ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ 92 (ರಚಿನ್ 1, ಅಲೆನ್ 22, ಸೈರ್ಟ್ 19, ವಿಲ್ ಯಂಗ್ 12, ಫಿಲಿಪ್ಸ್ 26, ಇಫ್ತಿಕಾರ್ 24ಕ್ಕೆ 3, ನವಾಜ್ 18ಕ್ಕೆ 2). ಪಂದ್ಯಶ್ರೇಷ್ಠ: ಇಫ್ತಿಕಾರ್ ಅಹ್ಮದ್, ಸರಣಿಶ್ರೇಷ್ಠ: ಫಿನ್ ಅಲೆನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts