More

    ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ ಸರಣಿ ಜಯ

    ಕ್ರೈಸ್ಟ್‌ಚರ್ಚ್: ಕೈಲ್ ಜೇಮಿಸನ್ (48ಕ್ಕೆ 6, ಪಂದ್ಯದಲ್ಲಿ 11 ವಿಕೆಟ್) ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು ಇನಿಂಗ್ಸ್ ಹಾಗೂ 176 ರನ್‌ಗಳಿಂದ ಶರಣಾಯಿತು. ಇದರೊಂದಿಗೆ ಆತಿಥೇಯ ನ್ಯೂಜಿಲೆಂಡ್ ತಂಡ 2 ಪಂದ್ಯಗಳ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿತು. ಹ್ಯಾಗ್ಲೆ ಓವೆಲ್ ಮೈದಾನದಲ್ಲಿ 1 ವಿಕೆಟ್‌ಗೆ 8 ರನ್‌ಗಳಿಂದ ದಿನದಾಟ ಆರಂಭಿಸಿದ ಪಾಕಿಸ್ತಾನ ತಂಡ 81.4 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 362 ರನ್ ಪೇರಿಸಬೇಕಿತ್ತು.

    ಇದನ್ನೂ ಓದಿ: ಬಿಡಬ್ಲ್ಯುಎಫ್ ವಿರುದ್ಧ ಭಾರತದ ಷಟ್ಲರ್ ಸೈನಾ ನೆಹ್ವಾಲ್ ಕಿಡಿ..!,

    ಪಾಕಿಸ್ತಾನ ಮೊದಲ ಇನಿಂಗ್ಸ್ 297 ರನ್ ಗಳಿಸಿದ್ದರೆ, ನ್ಯೂಜಿಲೆಂಡ್ 6 ವಿಕೆಟ್‌ಗೆ 659 ರನ್ ಕಲೆಹಾಕಿತ್ತು. ದ್ವಿಶತಕ ಸಾಧಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕೈಲ್ ಜೇಮಿಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ದಕ್ಕಿಸಿಕೊಂಡರು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿತು.

    ಪಾಕಿಸ್ತಾನ : 297 ಮತ್ತು 81.4 ಓವರ್‌ಗಳಲ್ಲಿ 186 (ಅಬಿದ್ ಅಲಿ 27, ಅಜರ್ ಅಲಿ 37, ಜಾರ್ ಗೊಹರ್ 37, ಕೈಲ್ ಜೇಮಿಸನ್ 48ಕ್ಕೆ 6, ಟ್ರೆಂಟ್ ಬೌಲ್ಟ್ 43ಕ್ಕೆ 3, ಕೇನ್ ವಿಲಿಯಮ್ಸನ್ 16ಕ್ಕೆ 1). ನ್ಯೂಜಿಲೆಂಡ್: 6 ವಿಕೆಟ್‌ಗೆ 659 ಡಿಕ್ಲೇರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts