More

    ಟಿ20 ವಿಶ್ವಕಪ್ ಸೂಪರ್-12 ಹಂತ ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಪಾಕಿಸ್ತಾನ

    ದುಬೈ: ಬಲಿಷ್ಠ ಭಾರತ, ನ್ಯೂಜಿಲೆಂಡ್ ತಂಡಗಳನ್ನು ಮಣಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ 2009ರ ಚಾಂಪಿಯನ್ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಸೂಪರ್ -12ರ ಹಣಾಹಣಿಯಲ್ಲಿ ಬಾಬರ್ ಅಜಮ್ ಸಾರಥ್ಯದ ಬಳಗಕ್ಕೆ ಅಫ್ಘಾನಿಸ್ತಾನ ತಂಡ ಎದುರಾಗಿದೆ. ಭಾರತದ ಎದುರು ವಿಶ್ವಕಪ್ ಸೋಲಿನ ಸರಪಳಿ ಕಳಚಿಕೊಂಡ ಬಳಿಕ ನ್ಯೂಜಿಲೆಂಡ್ ತಂಡಕ್ಕೂ ಸೋಲಿನ ರುಚಿ ತೋರಿಸುವ ಮೂಲಕ ಪಾಕ್ ತಂಡದ ಸೆಮೀಸ್ ಹಾದಿ ಬಹುತೇಕ ಖಚಿತಗೊಂಡಿದೆ. ಏಷ್ಯಾ ತಂಡಗಳ ಕದನದಲ್ಲಿ ಪಾಕ್ ತಂಡವೇ ಫೇವರಿಟ್ ಎನಿಸಿದೆ.

    * ಪಾಕ್ ತಂಡಕ್ಕೆ ಹ್ಯಾಟ್ರಿಕ್ ಕನಸು
    ಎರಡನೇ ಗುಂಪಿನಿಂದ ಅಗ್ರಸ್ಥಾನದೊಂದಿಗೆ ಸೆಮೀಸ್‌ಗೇರುವ ಹಂಬಲದಲ್ಲಿರುವ ಪಾಕಿಸ್ತಾನ ತಂಡ ಬ್ಯಾಟಿಂಗ್ ಹಾಗು ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದೆ. ಅಗ್ರಕ್ರಮಾಂಕ ಬ್ಯಾಟರ್‌ಗಳಾದ ಬಾಬರ್ ಅಜಮ್, ಮೊಹಮದ್ ರಿಜ್ವಾನ್, ಖರ್ ಜಮಾನ್, ಮೊಹಮದ್ ಹಫೀಜ್, ಶೋಯಿಬ್ ಮಲಿಕ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಶಹೀನ್ ಷಾ ಅಫ್ರಿದಿ, ಶಾದಾಬ್ ಖಾನ್, ಅಸಿಫ್ ಅಲಿ, ಶೋಯಿಬ್ ಮಕ್ಸೂದ್  ಅಫ್ಘಾನಿಸ್ತಾನ ತಂಡಕ್ಕೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ. ಬಲಿಷ್ಠ ತಂಡಗಳನ್ನು ಮಣಿಸಿ ಮಾನಸಿಕವಾಗಿ ಮೇಲುಗೈ ಹೊಂದಿರುವ ಪಾಕ್ ತಂಡ ಹ್ಯಾಟ್ರಿಕ್ ಕನಸಿನಲ್ಲಿದೆ.

    * ಶಾಕ್ ನೀಡುವ ತವಕದಲ್ಲಿ ಅಫ್ಘಾನಿಸ್ತಾನ
    ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ಎದುರು 130 ರನ್‌ಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿರುವ ಆ್ಘನ್ ತಂಡ, ನೆರೆಯ ಪಾಕ್ ತಂಡಕ್ಕೆ ಶಾಕ್ ನೀಡಲು ಸಜ್ಜಾಗಿದೆ. ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್‌ರಂಥ ಸ್ಟಾರ್ ಸ್ಪಿನ್ನರ್‌ಗಳನ್ನು ಹೊಂದಿರುವ ಅಫ್ಘಾನಿಸ್ತಾನ ತಂಡ ಪಾಕ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಸಾಮರ್ಥ್ಯ ಹೊಂದಿದೆ. ಸ್ಕಾಟ್ಲೆಂಡ್ ಎದುರು ಸ್ಫೋಟಿಸಿದ್ದ ಬ್ಯಾಟರ್‌ಗಳು ಮತ್ತೊಮ್ಮೆ ಮಿಂಚುವ ತವಕದಲ್ಲಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ಮುಖಾಮುಖಿ: 1, ಪಾಕಿಸ್ತಾನ: 1, ಅಫ್ಘಾನಿಸ್ತಾನ: 0
    ಟಿ20 ವಿಶ್ವಕಪ್‌ನಲ್ಲಿ: 1, ಪಾಕಿಸ್ತಾನ: 1, ಅಫ್ಘಾನಿಸ್ತಾನ: 0
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts