More

    ಭಾರತೀಯ ಇಂಜಿನಿಯರ್​ ಅನ್ನು ಜಾಗತಿಕ ಉಗ್ರನನ್ನಾಗಿಸಲು ಪಾಕ್​ ಯತ್ನ; ಅಮೆರಿಕ ಅಡ್ಡಗಾಲು

    ನವದೆಹಲಿ: ಅಫ್ಘಾನಿಸ್ತಾನದ ಮರುನಿರ್ಮಾಣ ಕಾರ್ಯದಲ್ಲಿ ಶ್ರಮಿಸುತ್ತಿರುವ ಭಾರತೀಯ ಕಂಪನಿಯೊಂದರಲ್ಲಿ ಇಂಜಿನಿಯರ್​ ಆಗಿರುವ ವೇಣು ಮಾಧವ್​ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಹುನ್ನಾರ ನಡೆಸಿದ್ದ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.

    ಡೋಂಗ್ರಾ ತನ್ನ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿದ್ದಲ್ಲದೆ, ಸಂಚಿನಲ್ಲಿ ಭಾಗಿಯಾಗಿದ್ದರು ಎಂಬುದು ಪಾಕಿಸ್ತಾನದ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅದು ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್​ಎಸ್​ಸಿ) ಮನವಿ ಮಾಡಿಕೊಂಡಿತ್ತು. ಆದರೆ, ಪಾಕ್​ನ ಈ ಪ್ರಯತ್ನಕ್ಕೆ ಅಮೆರಿಕ ಅಡ್ಡಗಾಲು ಹಾಕಿದೆ.

    ತನ್ನ ನೆಲವನ್ನು ಸುರಕ್ಷಿತ ಅಡಗುದಾಣವನ್ನಾಗಿಸಿಕೊಂಡು, ಜಮ್ಮು ಮತ್ತು ಕಾಶ್ಮೀರ ಸೇರಿ ಭಾರತದ ವಿವಿಧ ಭಾಗಗಳಲ್ಲಿ ಹಿಂಸಾ ಕೃತ್ಯಗಳನ್ನು ಎಸಗಲು ಪ್ರಚೋದನೆ ನೀಡಿ, ಸಂಚು ರೂಪಿಸುವ ಜತೆಗೆ ಅಗತ್ಯ ಸಹಕಾರ ನೀಡುತ್ತಿರುವ ಆರೋಪದಲ್ಲಿ ಜೈಷ್​ ಎ ಮೊಹಮ್ಮದ್​ನ ಪ್ರಮುಖ ಉಗ್ರ ಮಸೂದ್​ ಅಜರ್​ನನ್ನು ಯುಎನ್​ಎಸ್​ಸಿ ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಜತೆಗೆ ನೈತಿಕ ಮೇಲುಗೈ ಸಾಧಿಸುವ ಉದ್ದೇಶದಿಂದ ಪಾಕಿಸ್ತಾನ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಯುಎನ್​ಎಸ್​ಸಿ ಘೋಷಿಸುವಂತೆ ಮಾಡಲು ಹುನ್ನಾರ ನಡೆಸಿತ್ತು. ಇದಕ್ಕೆ ಚೀನಾ ಒತ್ತಾಸೆಯಾಗಿ ನಿಂತಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಪಾಕಿಸ್ತಾನದ ಪ್ರಕಾರ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಡೋಂಗ್ರಾ ಹಾಗೂ ಮೂವರು ಸಹಚರರು ಪಾಕಿಸ್ತಾನದಲ್ಲಿ ನಿರಂತರವಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಪಾಕಿಸ್ತಾನದ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅದು ಕಳೆದ ವರ್ಷದ ಸೆಪ್ಟೆಂಬರ್​ನಲ್ಲೇ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಆಗ್ರಹಿಸಿ ಯುಎನ್​ಎಸ್​ಸಿಯ 1267 ಅನುಮೋದನಾ ಸಮಿತಿಗೆ ಗೆ ಮನವಿ ಸಲ್ಲಿಸಿತ್ತು.

    ಆದರೆ, ಡೋಂಗ್ರಾ ಅವರು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಇನ್ನೂ ಹೆಚ್ಚಿನ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದ್ದ ಅಮೆರಿಕ ಈ ಮನವಿಯನ್ನು ಯುಎನ್​ಎಸ್​ಸಿ ತಡೆಹಿಡಿಯುವಂತೆ ಮಾಡಿತ್ತು. ಆದರೆ, ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಆದರೂ, ತನ್ನ ಮನವಿಯನ್ನು ಪುರಸ್ಕರಿಸಬೇಕು ಎಂದು ಯುಎನ್​ಎಸ್​ಸಿಯ ಅನುಮೋದನಾ ಸಮಿತಿಯ ಮೇಲೆ ಪಾಕ್​ ಒತ್ತಡ ಹೇರಲಾರಂಭಿಸಿತ್ತು. ಆದರೆ, ಇದಕ್ಕೆ ಅಮೆರಿಕ ಭಾರಿ ಪ್ರತಿರೋಧ ಒಡ್ಡಿದ್ದರಿಂದ, ಪಾಕ್​ನ ಮನವಿ ತಿರಸ್ಕೃತಗೊಂಡಿತು.

    ಇಷ್ಟಾದರೂ ಸುಮ್ಮನಾಗದ ಪಾಕಿಸ್ತಾನ ಡೋಂಗ್ರಾ ಅವರನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವ ತನ್ನ ಪ್ರಯತ್ನವನ್ನು ಜಾರಿಯಲ್ಲಿಟ್ಟಿದೆ. ಅಲ್ಲದೆ, ಈ ಕುರಿತು ಯುಎನ್​ಎಸ್​ಸಿಗೆ ಹೊಸದಾಗಿ ಮನವಿ ಸಲ್ಲಿಸಲು ಸಿದ್ಧತೆಯಲ್ಲಿ ತೊಡಗಿದೆ ಎನ್ನಲಾಗಿದೆ.

    ಮರ್ಯಾದೆ ಹತ್ಯೆ ಆಧಾರಿತ ಚಿತ್ರವನ್ನು ಬೇರೆ ರೀತಿ ಬಿಂಬಿಸಲು ಹೊರಟ ಆರ್​ಜಿವಿ ವಿರುದ್ಧ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts