More

    ಪಾಕ್​ ವಿಮಾನ ಅಪಘಾತದಲ್ಲಿ ಬದುಕುಳಿದವನಿಗೆ ಇದೆ ಭಾರತದ ಕನೆಕ್ಷನ್​!

    ಕರಾಚಿ: ಇಲ್ಲಿ ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಪವಡಸದೃಶವಾಗಿ ಬದುಕುಳಿದಿರುವ ಪಾಕಿಸ್ತಾನದ ಬ್ಯಾಂಕ್​ ಆಫ್​ ಪಂಜಾಬ್​ನ ಹಿರಿಯ ಅಧಿಕಾರಿ ಜಾಫರ್​ ಮಸೂದ್​ ಭಾರತದ ಕನೆಕ್ಷನ್​ ಹೊಂದಿದ್ದಾರೆ. ಇವರು ಮೂಲತಃ ಉತ್ತರ ಪ್ರದೇಶದ ಅಮ್ರೋಹಾದ ಸದ್ದೂ ಮೊಹಲ್ಲಾದ ನಿವಾಸಿಗಳು. ಅಷ್ಟೇ ಅಲ್ಲ, ಆಗಿನ ಕಾಲಕ್ಕೆ ಬಾಲಿವುಡ್​ನ ಬಹುದೊಡ್ಡ ಹಿಟ್​ ಎನಿಸಿಕೊಂಡಿದ್ದ ಪಾಕೀಜಾ ಚಿತ್ರದ ನಿರ್ಮಾತೃ ಕಮಲ್​ ಅಮ್ರೋಹಿ ಅವರ ಸಂಬಂಧಿ ಕೂಡ ಹೌದು.

    ಭಾರತದಲ್ಲಿರುವ ಅವರ ಸಹೋದರ ಸಂಬಂಧಿ ಆದಿಲ್​ ಜಾಫರ್​ ಈ ವಿಷಯವನ್ನು ತಿಳಿಸಿದ್ದಾರೆ. ಮುಂಬೈನಲ್ಲಿ ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲಿ ತೊಡಗಿರುವ ಆದಿಲ್​ ಜಾಫರ್​ ಪ್ರಕಾರ, ಜಾಫರ್​ ಮಸೂದ್​ ಅವರ ಕುಟುಂಬ 1952ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದೆ. ಜಾಫರ್​ ಮಸೂದ್​ ಅವರು ಆದಿಲ್​ ಜಾಫರ್​ ಅವರ ತಾಯಿಯ ಸಹೋದರ ಸಂಬಂಧಿ.

    ವಿಮಾನ ಅಪಘಾತದ ಸುದ್ದಿ ತಿಳಿಯುತ್ತಲೇ ಆದಿಲ್​ ಪಾಕಿಸ್ತಾನದಲ್ಲಿರುವ ಜಾಫರ್​ ಮಸೂದ್​ ಅವರ ಕುಟುಂಬದವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಜಾಫರ್​ ಮಸೂದ್​ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಕೇಳಿ ಇಡೀ ಕುಟುಂಬ ಸಮಾಧಾನ ನಿಟ್ಟುಸಿರು ಹೊರಚೆಲ್ಲಿತು ಎನ್ನಲಾಗಿದೆ.

    ಇದನ್ನೂ ಓದಿ: ರಂಜಾನ್​​​​ದಂದು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ, ತಬ್ಬಿಕೊಂಡು ಶುಭಾಶಯ ಹೇಳುವಂತಿಲ್ಲ: ವಕ್ಫ್​ ಬೋರ್ಡ್​​ ಸೂಚನೆ

    2015ರಲ್ಲಿ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ. ಕರಾಚಿಯಲ್ಲಿ ಜಾಫರ್​ ಮಸೂದ್​ ಅವರನ್ನು ಭೇಟಿಯಾಗಿದ್ದೆ. ತಮ್ಮ ಭಾರತದ ಹಿನ್ನೆಲೆಯನ್ನು ತಿಳಿದಿದ್ದ ಅವರು, ಉತ್ತರ ಪ್ರದೇಶದ ಅಮ್ರೋಹಾಕ್ಕೆ ಭೇಟಿ ನೀಡುವ ಆಸೆ ವ್ಯಕ್ತಪಡಿಸಿದ್ದರು ಎಂದು ಆದಿಲ್​ ಜಾಫರ್​ ತಿಳಿಸಿದ್ದಾರೆ.

    ಲಾಹೋರ್​ನಿಂದ ಕರಾಚಿಗೆ ಪ್ರಯಾಣಿಸುತ್ತಿದ್ದ ಪಿಐಎನ ಪಿಕೆ 8303 ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ರನ್​ವೇ ಪಕ್ಕದಲ್ಲಿರುವ ಮಾಡೆಲ್​ ಕಾಲನಿಯ ಜಿನ್ನಾ ಗಾರ್ಡನ್ಸ್​ನಲ್ಲಿ ಅಪಘಾತಕ್ಕೀಡಾಗಿತ್ತು. ಇದರಲ್ಲಿ 97 ಪ್ರಯಾಣಿಕರಿದ್ದರು. 96 ಜನರು ಮೃತಪಟ್ಟರೆ, ಜಾಫರ್​ ಮಸೂದ್​ ಮಾತ್ರ ಬದುಕುಳಿದಿದ್ದರು. ಸುಟ್ಟ ಗಾಯಗಳಾಗಿದ್ದರೂ, ಬೆಂಕಿಯಿಂದ ಆವರಿಸಿದ್ದ ದಟ್ಟ ಹೊಗೆಯ ನಡುವೆ ಸಣ್ಣದೊಂದು ಬೆಳಕಿನ ಕಿಂಡಿ ಕಂಡು ಅತ್ತ ಕಡೆ ಸಾಗಿ ವಿಮಾನದಿಂದ ಹಾರಿ ಪಾರಾಗಿದ್ದರು. ಇವರಿಗೆ ಪೃಷ್ಠ ಮತ್ತು ಕತ್ತಿನ ಭಾಗದಲ್ಲಿ ಗಾಯಗಳಾಗಿವೆ. ಸದ್ಯ ಇವರು ಕರಾಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಂಟಾರ್ಕ್ಟಿಕಾದಲ್ಲಿ ನಡೆಯುತ್ತಿದೆ ಒಂದರ ಹಿಂದೊಂದು ವಿಚಿತ್ರ; ರಕ್ತಕೆಂಪಾಯ್ತು..ಇದೀಗ ‘ಹಸಿರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts