More

    ನವಾಜ್ ಷರೀಫ್​ಗೆ ಅರೆಸ್ಟ್ ವಾರೆಂಟ್​ ಹೊರಡಿಸಿದ ಪಾಕ್ ಸರ್ಕಾರ

    ಇಸ್ಲಾಮಾಬಾದ್: ಬ್ರಿಟನ್​ನಲ್ಲಿದ್ದುಕೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಪಾಕಿಸ್ತಾನ ಸರ್ಕಾರ ಅರೆಸ್ಟ್​ ವಾರೆಂಟ್ ಹೊರಡಿಸಿದೆ. ಲಂಡನ್​ನಲ್ಲಿರುವ ರಾಯಭಾರ ಕಚೇರಿ ಮೂಲಕ ಅದನ್ನು ಪ್ರಕಟಸಿದೆ.

    ಷರೀಫ್ (70) ಅವರು ಕಳೆದ ವರ್ಷ ನವೆಂಬರ್​ನಲ್ಲಿ ಲಾಹೋರ್ ಕೋರ್ಟ್​ನ ಅನುಮತಿ ಪಡೆದು ನಾಲ್ಕುವಾರಗಳ ಚಿಕಿತ್ಸೆಗಾಗಿ ಲಂಡನ್ ತೆರಳಿದ್ದರು. ಮೂರು ಸಲ ಪ್ರಧಾನಿಯಾಗಿದ್ದ ಅವರು 2018ರ ಜುಲೈ 6ರಂದು ಅವೆನ್​ಫೀಲ್ಡ್ ಪ್ರಾಪರ್ಟಿ ಕೇಸ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದರು. ಇದೇ ಕೇಸ್​ನಲ್ಲಿ ಅವರ ಪುತ್ರಿ ಮರಿಯಂ ಮತ್ತು ಆಕೆಯ ಪತಿ ಮುಹಮ್ಮದ್ ಸಫ್ದರ್ ಕೂಡ ಅಪರಾಧಿ.

    ಇದನ್ನೂ ಓದಿ: ಸೋಂಕಿತರಿಗೆ ಸೀಟು ಕೊಟ್ಟು ಪುನಃ ಏರ್​ ಇಂಡಿಯಾ ಎಡವಟ್ಟು- ದುಬೈನಿಂದ ಶಿಸ್ತು ಕ್ರಮ

    ಇದಲ್ಲದೆ, ಷರೀಫ್ ಅವರು ಅಲ್​-ಅಜೀಜಿಯಾ ಸ್ಟೀಲ್ ಮಿಲ್ಸ್ ಕೇಸ್​ನಲ್ಲೂ 2018ರ ಡಿಸೆಂಬರ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಏಳು ವರ್ಷ ಸಜೆ ಶಿಕ್ಷೆಗೆ ಒಳಗಾಗಿದ್ದರು. ಆದರೆ, ಎರಡೂ ಪ್ರಕರಣಗಳಲ್ಲಿ ಜಾಮೀನುಇ ಪಡೆದ ಅವರು ಲಂಡನ್​ಗೆ ಚಿಕಿತ್ಸೆಗಾಗಿ ತೆರಳಿದ್ದರು. ಇದಾದ ನಂತರದಲ್ಲಿ ಕೋರ್ಟ್​ ಅವರಿಗೆ 8 ವಾರಗಳ ಕಾಲಾವಕಾಶವನ್ನು ಹಿಂದಿರುಗುವುದಕ್ಕೆ ನೀಡಿತ್ತು. ಅವರು ಹಿಂದಿರುಗದ ಕಾರಣ ಈಗ ಪಾಕ್ ಸರ್ಕಾರ ಅರೆಸ್ಟ್ ನೋಟಿಸ್ ಹೊರಡಿಸಿದೆ. ಸೆಪ್ಟೆಂಬರ್ 22 ರಂದು ಅವರನ್ನು ಇಸ್ಲಾಮಾಬಾದ್ ಕೋರ್ಟ್​ ಎದುರು ಹಾಜರುಪಡಿಸಬೇಕು. (ಏಜೆನ್ಸೀಸ್)

    ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ಪುದುಚೆರಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts