More

    ಭಾರತ ಉಪಖಂಡದಲ್ಲಿ ಮುಂದುವರಿದ ನಕ್ಷೆ ರಾಜಕೀಯ; ಪಿಒಕೆಯನ್ನು ತನ್ನದೆಂದು ಹೊಸ ನಕ್ಷೆ ಬರೆದ ಪಾಕಿಸ್ತಾನ

    ನವದೆಹಲಿ: ಭಾರತ ಉಪಖಂಡದಲ್ಲಿ ನಕ್ಷೆ ರಾಜಕೀಯ ಬಲು ಜೋರಾಗಿದೆ. ಇತ್ತೀಚೆಗಷ್ಟೇ ಭಾರತಕ್ಕೆ ಸೇರಿದ ಭಾಗಗಳು ತನ್ನದೆಂದು ಹೇಳಿಕೊಂಡು ನೇಪಾಳ ಹೊಸ ನಕ್ಷೆ ಬರೆದುಕೊಂಡಿತ್ತು. ಇದೀಗ ಪಾಕ್​ ಆಕ್ರಮಿತ ಕಾಶ್ಮೀರ ತನ್ನದೆಂದು ಹೇಳಿಕೊಂಡು ಪಾಕಿಸ್ತಾನ ಹೊಸ ನಕ್ಷೆ ಬರೆದುಕೊಂಡಿದೆ.

    ಕಾಶ್ಮೀರಕ್ಕೆ ಸ್ವಾಯತ್ತೆ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ಮೊದಲ ವರ್ಷಾಚರಣೆಯ ಮುನ್ನಾದಿನ ಪಾಕಿಸ್ತಾನ ಈ ದುಸ್ಸಾಹಸ ಮಾಡಿದೆ. ಮಂಗಳವಾರ ಈ ನಕ್ಷೆಯನ್ನು ಅನಾವರಣಗೊಳಿಸಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​, ಇದು ಪಾಕಿಸ್ತಾನದ ಜನತೆಯ ಆಶೋತ್ತರಗಳ ದ್ಯೋತಕವಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ತಾರ್ಕಿಕ ಅಂತ್ಯಕ್ಕಿಂತ, ಸತ್ಯ ಬಯಲಾಗಬೇಕು!; ಸುಶಾಂತ್ ಪ್ರಕರಣಕ್ಕೆ ಅನುಪಮ್ ಖೇರ್ ಬೆಂಬಲ

    ಪಾಕಿಸ್ತಾನದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ ಎಂದು ಇಮ್ರಾನ್​ ಖಾನ್​ ತಮ್ಮ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಪಾಕ್​ ಮತ್ತು ಕಾಶ್ಮೀರ ಜನತೆಯ ಆಶೋತ್ತರಗಳಿಗೆ ಅನುಗುಣವಾಗಿ ಹೊಸ ರಾಜಕೀಯ ಭೂಪಟವನ್ನು ರಚಿಸಿ, ಅನಾವರಣಗೊಳಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಪಾಕಿಸ್ತಾನ ಇದುವರೆಗೂ ಪಾಕ್​ ಆಕ್ರಮಿತ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿತ್ತು. ಆದರೆ, ಗಿಲ್ಗಿಟ್​-ಬಾಲ್ಟಿಸ್ತಾನವನ್ನು ಮಾತ್ರ ತನ್ನದೆಂದು ಹೇಳಿಕೊಳ್ಳುತ್ತಿತ್ತು. ಉಳಿದ ಭಾಗವನ್ನು ಆಜಾದ್​ ಕಾಶ್ಮೀರ ಎಂದೇ ಹೇಳುತ್ತಿತ್ತು. ಇದೀಗ ನೇಪಾಳದ ನಂತರದಲ್ಲಿ ಪಿಒಕೆ ತನಗೆ ಸೇರಿದ್ದೆಂದು ಹೇಳಿಕೊಂಡು ಹೊಸ ರಾಜಕೀಯ ಭೂಪಟ ರಚಿಸಿ ಮತ್ತೊಂದು ವಿವಾದ ಸೃಷ್ಟಿಸಿದೆ.

    ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾಳನ್ನು ರೇಪ್​ ಮಾಡಿ ಸಾಯಿಸಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts