More

    ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ

    ಚಿಕ್ಕಮಗಳೂರು: ಗ್ರಾಮೀಣ ಸೊಬಗಿನ ಜೋಡೆತ್ತಿನ ಗಾಡಿ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.

    ಮಾಗಡಿ ಗ್ರಾಮದ ಸಮೀಪ ಮುಗುಳುವಳ್ಳಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪರಂಪರೆ ಬೆಳೆಸುವ ನಿಟ್ಟಿನಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆ ಆಯೋಜಿಸಿರುವುದು ಖುಷಿಯ ಸಂಗತಿ. ವಿವಿಧ ಜಿಲ್ಲೆಗಳಿಂದ ಎತ್ತುಗಳನ್ನು ಶೃಂಗರಿಸಿಕೊಂಡು ಸ್ಪರ್ಧೆಯಲ್ಲಿ ಭಾಗಿಯಾಗಿರುವುದು ಸ್ಪರ್ಧೆ ಮೇಲೆ ಯುವ ಜನತೆಗಿರುವ ಆಸಕ್ತಿ ತಿಳಿಸುತ್ತದೆ ಎಂದು ಹೇಳಿದರು.
    ಮುಗುಳುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಹಾಗೂ ಯುವಕರು ಜೋಡೆತ್ತಿನಗಾಡಿ ಸ್ಪರ್ಧೆ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ. ರೈತಾಪಿ ವರ್ಗದ ಜೋಡೆತ್ತಿನ ಗಾಡಿ ಸ್ಪರ್ಧೆ ನೋಡುಗರಿಗೆ ಮನರಂಜನೆ ನೀಡಲಿದೆ ಎಂದರು.
    ಸ್ಪರ್ಧೆ ಆಯೋಜಕ ಕಾಂತರಾಜು ಮಾತನಾಡಿ, ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಜೋಡೆತ್ತಿನ ಸ್ಪರ್ಧೆ ಆಯೋಜಿಸಿದ್ದು, 50ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ. ಒಟ್ಟು ನಾಲ್ಕು ಬಹುಮಾನಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
    ಗ್ರಾಪಂ ಸದಸ್ಯ ಮಲ್ಲೇಶ್, ಉಮೇಶ್, ಗ್ರಾಮದ ಹಿರಿಯ ಎಂ.ಎಸ್.ಮಂಜುನಾಥ್, ಆಯೋಜಕರಾದ ನವೀನ್, ಪುನೀತ್, ಮುಖಂಡರಾದ ಕುರುವಂಗಿ ವೆಂಕಟೇಶ್, ಕೇಶವ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts