More

    ಪದ್ಮಶ್ರೀ ಪುರಸ್ಕೃತ ಈ ವಯೋವೃದ್ಧರಿಗೆ ಈಗ ಚಿಕಿತ್ಸೆಗೂ ದುಡ್ಡಿಲ್ವಂತೆ!; 27 ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ಮಾಡಿರುವ ಶರೀಫ್​ ಚಾಚಾ..‘

    ನವದೆಹಲಿ: ಇವರು ಪದ್ಮಶ್ರೀ ಪ್ರಶಸ್ತಿಗೂ ಆಯ್ಕೆ ಆಗಿದ್ದಾರೆ. ಮಾತ್ರವಲ್ಲ 27 ವರ್ಷಗಳಿಂದ ಅನಾಥ ಶವಗಳ ಸಂಸ್ಕಾರವನ್ನೂ ಮಾಡಿದ್ದಾರೆ. ಆದರೆ ಇದೀಗ ಹಾಸಿಗೆ ಹಿಡಿದಿರುವ ಇವರಿಗೆ ಚಿಕಿತ್ಸೆಗೂ ಹಣವಿಲ್ಲವಂತೆ. ದಯನೀಯ ಸ್ಥಿತಿಯಲ್ಲಿರುವ ಎಂಬತ್ತರ ವಯಸ್ಸಿನ ಈ ವಯೋವೃದ್ಧರನ್ನು ಜನರು ಶರೀಫ್ ಚಾಚಾ ಎಂದೇ ಕರೆಯುತ್ತಾರೆ.

    ಶರೀಫ್ ಚಾಚಾ ಅರ್ಥಾತ್ ಮೊಹಮದ್ ಶರೀಫ್​ ಎಂಬ ಹೆಸರಿನ ಈ ವ್ಯಕ್ತಿ ಇರುವುದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಯೋಧ್ಯೆಯಲ್ಲಿ. ಕಳೆದ ವರ್ಷ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಈಗ ಆರ್ಥಿಕ ಸಂಕಷ್ಟದಿಂದ ದಯನೀಯ ಸ್ಥಿತಿಯಲ್ಲಿ ಇರುವ ಇವರು ಇನ್ನೊಬ್ಬರ ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ನಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಈಗಲೂ ಬಾಡಿಗೆ ಮನೆಯಲ್ಲಿ ವಾಸವಿದೆ. ಶರೀಫ್​ ಅವರಿಗೆ ಯಾವುದಾದರೂ ಪಿಂಚಣಿ ಸಿಕ್ಕರೆ ಅವರ ಚಿಕಿತ್ಸೆಗಾದರೂ ವೈದ್ಯಕೀಯ ಖರ್ಚಿಗಾದರೂ ನೆರವಾಗುತ್ತದೆ ಎನ್ನುತ್ತಾರೆ ಕುಟುಂಬಸ್ಥರು. ಕಳೆದ 2 ತಿಂಗಳಿಂದ ಹಾಸಿಗೆ ಹಿಡಿದಿರುವ ಇವರು 27 ವರ್ಷಗಳಿಂದ ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇವರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿರುವ ಬಿಜೆಪಿ ಸಂಸದ ಲಲ್ಲೂ ಸಿಂಗ್, ಅಗತ್ಯ ನೆರವು ನೀಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

    ನವ ದಂಪತಿಗೆ ಪೆಟ್ರೋಲ್​, ಸಿಲಿಂಡರ್​ ಗಿಫ್ಟ್​! ಸ್ನೇಹಿತರೆಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts