More

    ಎಸ್​ಎಂ ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ ಹಿನ್ನೆಲೆ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಸಿಎಂ

    ಬೆಂಗಳೂರು: ಈ ಬಾರಿ ಒಟ್ಟು 6 ಜನರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದ್ದು ಅದರಲ್ಲಿ ಕರ್ನಾಟಕದ ಎಸ್​ಎಂ ಕೃಷ್ಣ ಕೂಡ ಒಬ್ಬರು. ಇನ್ನು 9 ಜನರಿಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದ್ದು 91 ಜನರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

    ಹಿರಿಯ ರಾಜಕಾರಣಿ ಎಸ್​ ಎಂ ಕೃಷ್ಣಗೆ ಇಂದು ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು ಈ ಹಿನ್ನೆಲೆಯಲ್ಲಿ ಸದಾಶಿವ ನಗರದಲ್ಲಿರುವ ಅವರ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿ‌ ಭೇಟಿ ನೀಡಿದ್ದಾರೆ. ಕೃಷ್ಣರನ್ನು ಅಭಿನಂದಿಸಲು ಮುಖ್ಯಮಂತ್ರಿ ಬೊಮ್ಮಾಯಿ‌ ಆಗಮಿಸಿದ್ದು ಅವರಿಗೆ ಸಚಿವರಾದ ಆರ್ ಅಶೋಕ್, ಸುಧಾಕರ್ ಸಾಥ್ ನೀಡಿದ್ದಾರೆ. ಎಸ್​ಎಂ ಕೃಷ್ಣರಿಗೆ ಶಾಲು ಹೊದಿಸಿ, ಹೂವಿನಗುಚ್ಚ ನೀಡಿ ಸಿಎಂ ಬೊಮ್ಮಾಯಿ‌ ಅಭಿನಂದಿಸಿದ್ದು ಎಸ್ ಎಂ ಕೃಷ್ಣ ಮನೆಗೆ ಸಚಿವರಾದ ಅಶ್ವಥ್ ನಾರಾಯಣ, ಗೋಪಾಲಯ್ಯ ಆಗಮಿಸಿದ್ದಾರೆ.

    ಈ ಸಂದರ್ಭ ಸಿಎಂ ಬೊಮ್ಮಾಯಿ‌ ಹೇಳಿಕೆ ನೀಡಿದ್ದು ‘ರಾಜ್ಯದ ಹೆಮ್ಮೆ, ನಾಡು ಕಂಡ ಸಜ್ಜನ ರಾಜಕಾರಣಿ ಆಗಿರುವ ಎಸ್​ಎಂ ಕೃಷ್ಣ ಉತ್ತಮ ಆಡಳಿತ ನೀಡಿ, ಜನಪರ ಕಾರ್ಯಕ್ರಮ ಕೊಟ್ಟವರು. ಭಾರತ ಸರ್ಕಾರ ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿದ್ದು ನಮ್ಮೆಲ್ಕರಿಗೆ ಅಭಿಮಾನ ತಂದಿದೆ. ಗುಣತ್ಮಾಕ ಆಡಳಿತ ನೀಡಿದವರಿಗೆ ಪ್ರಶಸ್ತಿ ನೀಡಿದ್ದು ಯೋಗ್ಯವಾಗಿದೆ ಎಲ್ಲ ವರ್ಗದವರಿಗೆ ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ. ಯಶಸ್ವಿನಿ ಯೋಜನೆ ತಂದವರು, ರೈತರ ಕುಟುಂಬಕ್ಕೆ ಆರೋಗ್ಯ ಕೊಟ್ಟವರು. ಕಳೆದ ಬಜೆಟ್ ನಲ್ಲಿ ಮತ್ತೆ ಈ ಯೋಜನೆ ಆರಂಭ ಮಾಡಿದ್ದೇವೆ.

    ಎಸ್​ಎಂ ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ ಹಿನ್ನೆಲೆ ಮನೆಗೆ ಭೇಟಿ ನೀಡಿ ಅಭಿನಂದಿಸಿದ ಸಿಎಂ

    ರೈತನಿಗೆ ಬೇರೆ ಆದಯವಿಲ್ಲ, ಉತ್ತಮ ಆರೋಗ್ಯ ಕೊಡಬೇಕು ಎಂಬುದು ಇವರ ಆಶಯ. ಮಧ್ಯಾಹ್ನ ಬಿಸಿ ಊಟ ಆರಂಭಿಸಿದ್ದು ಕೂಡ ಕೃಷ್ಣ ಅವರ ಕಾಲದಲ್ಲೇ. ಮಕ್ಕಳು ಹಸಿದು ಪಾಠ ಕೇಳಬಾರದು ಅಂತ ಈ ಯೋಜನೆ ತಂದ್ರು. ಕಾವೇರಿ,ಕೃಷ್ಣ ವಿಚಾರವಾಗಿ ಇವರು ಉತ್ತಮ ನಿಲುವು ತೆಗೆದುಕೊಂಡಿದ್ರು. ಕೃಷ್ಣರ ಸಾರ್ವಜನಿಕ ಬದಕು ನಮಗೆ ಮಾದರಿಯಾಗಿದೆ. ಐಟಿ, ಬಿಟಿ ಕಂಪನಿ ಬೆಂಗಳೂರಿನಲ್ಲಿ ಬೆಳದಿದ್ರೆ ಅದಕ್ಕೆ ಕೃಷ್ಣ ಅವರು ಕಾರಣ. ಎಲ್ಲ ರಂಗದಲ್ಲಿ ಕೂಡ ಉತ್ತಮ ಕಾರ್ಯಕ್ರಮ ಕೃಷ್ಣ ಅವರು ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಗುರುತಿಸಿ ಪದ್ಮವಿಭೂಷಣ ಕೊಟ್ಟಿದ್ದಾರೆ. ಇದು ಮೋದಿ ಮುತ್ಸದಿ ರಾಜಕಾರಣಿ ಅಂತ ತೊರಿಸುತ್ತೆ. ಎಲ್ಲ ಎಂಟು ಪ್ರಶಸ್ತಿ ಪುರಸ್ಕೃತರು ಅವರ ರಂಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರೂ ಕೂಡ ದೇಶದ ಮುತ್ತುರತ್ನಗಳು. ಹಿಂದೆ ತರಹ ಪದ್ಮವಿಭೂಷಣ ಪ್ರಶಸ್ತಿಗಾಗಿ ಬಯೋಡೇಟಾ ಹಿಡಿದುಕೊಂಡು ಓಡಾಡುವುದು ಈಗ ತಪ್ಪಿದೆ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts