More

    ಭತ್ತಕ್ಕೆ ನೀರುಣಿಸುತ್ತಿದ್ದ ಭಟ್ರಹಳ್ಳಿ ಕೆರೆ ಖಾಲಿ ಖಾಲಿ

    ಕೆ.ಕೆಂಚಪ್ಪ ಮೊಳಕಾಲ್ಮೂರು
    ವರ್ಷದಲ್ಲಿ ಎರಡು ಬಾರಿ ಭತ್ತ ಬೆಳೆಯಲು ಆಸರೆಯಾಗಿದ್ದ ಭಟ್ರಹಳ್ಳಿ ಕೆರೆಯಂಗಳದಲ್ಲಿ ಈಗ ನೀರು ಬದಲು ಜಾಲಿ ಆವರಿಸಿದ್ದು, ಅದರ ಮೂಲಸ್ವರೂಪಕ್ಕೆ ಧಕ್ಕೆಯಾಗಿದೆ. ಇದರ ಪುನಶ್ಚೇತನಕ್ಕೆ ಅಧಿಕಾರಿಗಳು ಇಚ್ಛಾಶಕ್ತಿ ಮೆರೆಯಬೇಕಿದೆ.

    ಮುನ್ನೂರು ವರ್ಷಗಳ ಇತಿಹಾಸವಿರುವ ಭಟ್ರಹಳ್ಳಿ ಕೆರೆ 91 ಎಕರೆ ವಿಸ್ತೀರ್ಣ ಇದೆ. 300 ಎಕರೆಗೆ ಮಾಗಾಣಿಗೆ ನೀರುಣಿಸುವುದಲ್ಲದೆ, ಈ ಭಾಗದ ಹಳ್ಳಿಗಳಿಗೆ ಜೀವನಾಡಿಯಾಗಿದೆ. ಅಡವಿ, ಜಮೀನುಗಳಿಂದ ಹರಿದು ಬಂದ ಅಲ್ಪ ನೀರು ಸಂಗ್ರಹವಾಗುತ್ತದೆ.

    ಆದರೆ, ಕೆರೆ ಸಂಪರ್ಕಿಸುವ ಹಳೆಯ ರಾಜಕಾಲುವೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಒಡೆದು 7 ವರ್ಷವಾದರೂ ದುರಸ್ತಿಯಾಗಿಲ್ಲ. ಇದರಿಂದ ಕೆರೆ ಮೇಲ್ಭಾಗದ ಚಿನ್ನಹಗರಿ ಹಳ್ಳ, ಕೂಡ್ಲಿಗಿ ಪ್ರದೇಶದಿಂದ ಹರಿದು ಸೇರಬೇಕಿದ್ದ ನೀರು ವ್ಯರ್ಥವಾಗಿ ಆಂಧ್ರ ಪಾಲಾಗುತ್ತಿದೆ.

    ಕೆರೆ ಅಂಗಳದ ತುಂಬ ಹೂಳು, ಬಳ್ಳಾರಿ ಜಾಲಿ ತುಂಬಿದೆ. ಅಕ್ಕಪಕ್ಕದ ಊರಿನ ಕೆರೆಗಳು ತುಂಬಿರುವ ದೃಶ್ಯ ನೋಡಿದರೆ ನಮಗ್ಯಾಕೆ ಇಂತಹ ಶಾಪ ಎಂಬ ಪ್ರಶ್ನೆ ಎದುರಾಗುತ್ತದೆ. ಕಾಲುವೆ ಮತ್ತು ತೂಬು ಭದ್ರಗೊಂಡರೆ ಮುಂದಿನ ಮಳೆಗಾಲದಲ್ಲಾದರೂ ನೀರು ಕಾಣಬಹುದು ಎನ್ನುತ್ತಾರೆ ಸ್ಥಳೀಯರು.

    ಭಟ್ರಹಳ್ಳಿ ಕೆರೆ ತುಂಬಿದರೆ ವರ್ಷದಲ್ಲಿ 2 ಬೆಳೆ ಭತ್ತ, ರಾಗಿ, ಜೋಳ ಕೈಸೇರುತ್ತಿದ್ದವು. ಅದು ಈಗ ಕನಸಾಗಿದೆ. ಕೆರೆ ಮೇಲ್ಭಾಗದಲ್ಲಿರುವ ರಾಜಕಾಲುವೆ ಅಲ್ಲಲ್ಲಿ ಒಡೆದು ಹಾಳಾಗಿದ್ದು, ಸರಿಪಡಿಸುವಂತೆ ಆರೇಳು ವರ್ಷಗಳಿಂದ ತಾಲೂಕು, ಜಿಲ್ಲಾಡಳಿತ, ಸ್ಥಳೀಯ ಶಾಸಕ ಹಾಗೂ ಮೂವರು ಸಿಎಂಗಳಿಗೂ ಪತ್ರ ಬರೆಯಲಾಗಿದೆ. ಆದರೆ, ಇದ್ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯ ಮುಖಂಡರ ಬೇಸರದ ಮಾತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts